ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ನೆನಪಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಅಕ್ಟೋಬರ್ 3 ರಂದು ಹಾಡು ಹಳೆಯದಾದರೇನು ಸಂಗೀತ ಸಂಜೆಯನ್ನ ಆಯೋಜಿಸಲಾಗಿದೆ,
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಡಿಟಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾಹಿತಿ ನೀಡಿದರು.
ಅ.3 ರಂದು ಸಂಜೆ ಕಲಾಮಂದಿರದಲ್ಲಿ ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ನೆನಪಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಾಡುಹಳೆಯದಾದರೇನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಜನಪ್ರಿಯ ಚಿತ್ರಗೀತೆಗಳ ಸಂಗೀತ ಸಂಜೆಯನ್ನ ಆಯೋಜಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಪ್ರಶಸ್ತಿಗಳ ವಿಜೇತ ಕನ್ನಡದ ಚಿತ್ರಬ್ರಹ್ಮ ಅವರ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು, ಕಾದಂಬರಿ ಆಧಾರಿತ ಮಹಿಳಾ ಪ್ರಾಧನ್ಯತೆ ಉತ್ತಮ ಸಂಗೀತ ಹಾಡುಗಳುಳ್ಳ ಕೌಟುಂಬಿಕ ಚಿತ್ರವಾಗಿದ್ದವು, ಕಳೆದ 12ವರ್ಷಗಳಿಂದ ಹಾಡುಹಳೆಯದಾದರೇನು ಬ್ಯಾನರ್ ಮೂಲಕ ಮೈಸೂರಿನಲ್ಲಿ ಹಲವಾರು ಕಲಾವಿದರು ಪ್ರದರ್ಶನ ನೀಡಿದ್ದಾರೆ ಕಲಾಭಿಮಾನಿಗಳ ಅಪೇಕ್ಷೆ ಮೇರೆಗೆ ಮತ್ತೊಮ್ಮೆ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ನಿರೂಪಕ ಅಜಯ್ ಶಾಸ್ತ್ರಿ ಸಾರಥ್ಯದಲ್ಲಿ ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ವಾದ್ಯಸಂಗೀತಗಾರರು ಜನಪ್ರಿಯ ಗಾಯಕರು ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿರುವ ಜನಪ್ರಿಯ ಚಿತ್ರೆಗೀತೆಗಳನ್ನ ಪ್ರಸ್ತುತ ಪಡಿಸುವ ಹಾಡು
ಹಳೆಯದಾದರೇನು ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ, ಪ್ರವೇಶ ಉಚಿತವಿದ್ದು ಸಂಜೆ 4.45ರೊಳಗೆ ಕಲಾಪ್ರೇಕ್ಷಕರು ಆಸೀನರಾಗಿರಬೇಕು ಎಂದು ಡಿ.ಟಿ.ಪ್ರಕಾಶ್ ಮನವಿ ಮಾಡಿದರು.
ಕಲಾವಿದರುಗಳಾದ ತಬಲ ರಘುನಾಥ್, ಡೋಳಕ್ ರವಿಕಿರಣ, ರಿದಂ ಪ್ಯಾಡ್ ರಿದಂ ಗುರುದತ್ ಮತ್ತು ವಿನಯ್ ರಂಗಧೋಳ್, ಕೀಬೋರ್ಡ್ ವಾದನದಲ್ಲಿ ಶರತ್ ಮತ್ತು ಪುರುಷೋತ್ತಮ್, ಗಿಟಾರ್ ಪ್ರದೀಪ್ ಕಿಗ್ಗಾಲ್, ಪರ್ಕ್ಯೂಷನ್ ಗಾಂಧಿನಗರ ಪ್ರದೀಪ್, ಗಾಯನದಲ್ಲಿ ಲಕ್ಷ್ಮಿ ದಿನೇಶ್, ದಿವ್ಯ ಸಚ್ಚಿ, ಡಾ.ರೇಖಾ ಅರುಣ್, ಅಪೂರ್ವಾ ಅರ್ಪಿತಾ, ಅಶ್ವಿನ್ ಪ್ರಭು, ರಾಮಚಂದ್ರ, ಪುರುಷೋತ್ತಮ್, ಗುರುರಾಜ್, ಇನ್ನಿತರರು ಭಾಗವಹಿಸಲಿದ್ದಾರೆ
ಕಾರ್ಯಕ್ರಮವನ್ನು ಪುಟ್ಟಣ್ಣ ಕಣಗಾಲ್ ಅವರ ಪುತ್ರಿ ವಿದುಷಿ ತ್ರಿವೇಣಿ ಕಣಗಾಲ್,
ಪುಟ್ಟಣ್ಣ ಕಣಗಾಲ್ ಅವರ ಮೊಮ್ಮಗಳು
ವಿದುಷಿ ಗೀತಾಂಜಲಿ ಕಣಗಾಲ್ ಉದ್ಘಾಟನೆ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಡಿ.ಟಿ. ಪ್ರಕಾಶ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ, ಶಾಸಕರಾದ ಕೆ. ಹರೀಶ್ ಗೌಡ, ಟಿ.ಎಸ್ ಶ್ರೀವತ್ಸ, ಜಿ.ಟಿ. ದೇವೆಗೌಡ, ಜಿ.ಡಿ ಹರೀಶ್ ಗೌಡ, ಮಾಜಿ ಸಚಿವ ಸಾ ರಾ. ಮಹೇಶ್, ಮಾಜಿ ಶಾಸಕ ಎಲ್. ನಾಗೇಂದ್ರ, ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸಮಾಜ ಸೇವಕರಾದ ಕೆ.ರಘುರಾಂ ವಾಜಪೇಯಿ, ನಟರಾಜ ಜೋಯಿಸ್, ಎನ್.ಎಮ್ ನವೀನ್ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ, ಮಾ ವಿ ರಾಂಪ್ರಸಾದ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ರವಿಶಾಸ್ತ್ರಿ, ಕೃಷ್ಣದಾಸ್ ಪುರಾಣಿಕ್, ಕೆ ಬಿ ಲಿಂಗರಾಜು, ನಾಗರಾಜ ಭೈರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಡಿ.ಟಿ.ಪ್ರಕಾಶ್ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ (ಪಾತಿ), ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿದಂ ಗುರುದತ್, ನಿರೂಪಕ ಅಜಯ್ ಶಾಸ್ತ್ರಿ ಉಪಸ್ಥಿತರಿದ್ದರು.
