ಮೈಸೂರು, ಏ.1: ಸಿದ್ದಗಂಗಾ ಮಠದ
ಡಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿ ಪ್ರಯುಕ್ತ, ಜನಸೇವಕ ಯುವ ಬ್ರಿಗೇಡ್ ವತಿಯಿಂದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ.
ಬೋಗಾದಿ ನ್ಯಾಯಾಂಗ ಬಡಾವಣೆಯಲ್ಲಿ ಶಿಬಿರ ಆಯೋಜಿಸಿದ್ದು,
ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
7ದಿನಗಳ ಕಾಲ ನಡೆಯುವ ಈ ಉಚಿತ ಬೇಸಿಗೆ ಶಿಭಿರ ಮಕ್ಕಳ ಮನೋವಿಕಾಸಕ್ಕೆ ಪ್ರತಿಭೆಗೆ ಅವಕಾಶ ಇರುತ್ತದೆ.
ಬಡಾವಣೆಯ ಸುತ್ತಮುತ್ತಲಿನ ಪೋಷಕರು ತಮ್ಮ ಮಕ್ಕಳನ್ನು ಬೆಳಿಗ್ಗೆ 9ರಿಂದ ಮಧ್ಯಾನ್ಹ 1 ಗಂಟೆಯವರೆಗೆ ಕರೆದುಕೊಂಡು ಬರಬಹುದು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಬೋಗಾದಿ ನ್ಯಾಯಾಂಗ ಬಡಾವಣೆ ಬೆಂಚ್ ಕಟ್ಟೆ ಮಾರಮ್ಮ ದೇವಸ್ಥಾನ ಬಳಿ ಶಿಬಿರ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಗೆ
ಮೊಬೈಲ್ 7204173440 ಸಂಪರ್ಕಿಸಬಹುದಾಗಿದೆ.
ಸಂಪನ್ಮೂಲ ರಂಗ ಶಿಕ್ಷಣದ ಶಿಬಿರ ಮುಖ್ಯಸ್ಥರಾಗಿ ಮತ್ತು ಆಯೋಜಕರಾಗಿ ಶ್ರೀ ರಾಘವೇಂದ್ರ, ರಾಮೇಗೌಡರು, ಮುರಳಿಧರ್, ಲಕ್ಷ್ಮೀಶ್, ಕುಮಾರಿ ಪುಷ್ಪಲತ ನಂದಕುಮಾರಿ,ಕೌಶಲ್ಯ ಆನಂದ್ ಬಾಬು ಮತ್ತಿತರರು ಮಾತನಾಡಿ ಶುಭ ಹಾರೈಸಿದರು.
ಸುಮಾರು 60 ಮಕ್ಕಳು ನೋಂದಣಿ ಮಾಡಿಸಿ ಕೊಂಡಿದ್ದು ಶಿಬಿರದ ಉಪಯೋಗ ಪಡಿಸಿಕೊಳ್ಳಲು ನಾಂದಿ ಹಾಡಿದರು.
ಕಾರ್ಯಕ್ರಮದಲ್ಲಿ ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷರಾದ ರಾಘವೇಂದ್ರ ಡಿ, ಆನಂದ್, ಶ್ರೀನಿವಾಸ, ರಾಮೇಗೌಡರು, ವಿಜಯಕುಮಾರ್, ಲಕ್ಷ್ಮೀಶ್, ಸೋಮಶೇಖರ್, ಯೋಗೀಶ್, ರವಿ ಕಾಳಯ್ಯ ಮತ್ತಿತರರು ಹಾಜರಿದ್ದರು.
