ನವದೆಹಲಿ: ದೇಶದ ಪ್ರತಿಷ್ಠಿತ ನಾಗರಿಕ ಗೌರವಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವ ದೇಶಕ್ಕೆ, ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಿ ಹರ್ಷ ವ್ಯಕ್ತಪಡಿಸಿದೆ.
ಈ ವರ್ಷ ಐದು ಜನರಿಗೆ ಪದ್ಮವಿಭೂಷಣ, 13 ಜನರಿಗೆ ಪದ್ಮಭೂಷಣ ಮತ್ತು 113 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಚಲನಚಿತ್ರ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಜಾರ್ಖಂಡ್ ರಾಜ್ಯ ಸ್ಥಾಪನೆಗಾಗಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಶಿಬು ಸೊರೆನ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೂ ಪದ್ಮಭೂಷಣ ಪ್ರಶಸ್ತಿ ನೀಡಲಾಗುತ್ತಿದೆ.
ಚುನಾವಣಾ ರಾಜ್ಯವಾದ ಕೇರಳದಿಂದ ಎಂಟು ಜನರು, ತಮಿಳುನಾಡಿನಿಂದ 13 ಜನರು, ಬಂಗಾಳದಿಂದ 11 ಜನರು ಮತ್ತು ಅಸ್ಸಾಂನಿಂದ 5 ಜನರು ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದಲ್ಲದೆ, ಉತ್ತರ ಪ್ರದೇಶದ 11 ಮತ್ತು ಮಹಾರಾಷ್ಟ್ರದ 16 ಮಂದಿ ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪದ್ಮ ವಿಭೂಷಣ:
ಧರ್ಮೇಂದ್ರ (ಮರಣೋತ್ತರ),
ಕೆ.ಟಿ ಥಾಮಸ್,ಎನ್ ರಂಜಮ್,
ಪಿ. ನಾರಾಯಣನ್,
ವಿ.ಎಸ್.ಅಚ್ಚುತನಂದನ್ (ಮರಣೋತ್ತರ),
ಪದ್ಮ ಭೂಷಣ:
ಅಲ್ಕಾ ಯಾಗ್ನಿಕ್,
ಭಗತ್ ಸಿಂಗ್ ಕೊಶ್ಯಾರಿ,
ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ,
ಮಮ್ಮುಟ್ಟಿ,ನೋರಿ ದತ್ತಾತ್ರೇಯುಡು,
ಪಿಯೂಷ್ ಪಾಂಡೆ (ಮರಣೋತ್ತರ),
ಎಸ್ಕೆಎಂ ಮೈಲಾನಂಧನ್,
ಶತಾವಧಾನಿ ಆರ್ ಗಣೇಶ್,
ಶಿಬು ಸೊರೆನ್ (ಮರಣೋತ್ತರ),
ಉದಯ್ ಕೊಟಕ್,
ವಿ.ಕೆ. ಮಲ್ಹೋತ್ರಾ (ಮರಣೋತ್ತರ),
ವೆಲ್ಲಪ್ಪಳ್ಳಿ ನಟೇಶನ್,
ವಿಜಯ್ ಅಮೃತರಾಜ್ ಅವರು ಭಾಜನರಾಗಿದ್ದಾರೆ.
ಒಟ್ಟು 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಕ್ರಿಕೆಟಿಗ ರೋಹಿತ್ ಶರ್ಮಾ, ಅಂಕೇಗೌಡ, ಡಾ ಪ್ರಭಾಕರ್ ಕೋರೆ, ಎಸ್ ಜಿ ಸುಶಿಲಮ್ಮ, ಶಶಿಶೇಖರ್ ವೆಂಪತಿ, ಶುಭವೇಂಕಟೇಶ ಅಯ್ಯಂಗಾರ್ ಸೇರಿ ಒಟ್ಟು 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
