ಮೈಸೂರು: ಮಹಿಳೆಯರಲ್ಲಿ ಅಘಾದವಾದ ಶಕ್ತಿ ಅಡಗಿದೆ. ಸಮಾಜದ ಅಭ್ಯುದಯದಲ್ಲಿ ಮಹಿಳಾ ಶಕ್ತಿಯ ಕೊಡುಗೆ ವಿಶಿಷ್ಟ,ಅನನ್ಯ ಎಂದು ಶಾಸಕ ಹರೀಶ್ ಗೌಡ ಬಣ್ಣಿಸಿದರು.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮಿ ಕೊಲ್ಲಾಪುರದಮ್ಮನವರ ದೇವಸ್ಥಾನದ ಆವರಣದಲ್ಲಿ ಮೈಸೂರು ಯುವ ಬಳಗದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಬಿಂದು ( ರೈಲ್ವೆ ಚಾಲಾಕಿ)
ಸಿರಿ ( ಛಾಯಾಗ್ರಹಕಿ )
ಯಶಿಕಾ ( ಕ್ರಿಕೆಟ್ ಕ್ಷೇತ್ರ)
ದೀಕ್ಷಾ ( ಕುಸ್ತಿಪಟು)
ಅನುಷಾ( ಬಸ್ ಮೆಕಾನಿಕ್)
ಶಾಲಿನಿ ( ಅಂಚೆ ನೌಕರಿ)
ಲಿಂಗಮ್ಮ ( ಬಸ್ ಚಾಲಾಕಿ)
ಶೃತಿ ( ವೈದ್ಯ)
ವಾರಿಜ ( ಭರತನಾಟ್ಯ ಶಿಕ್ಷಕಿ)
ನೀಲಮ್ಮ (ರುದ್ರಭೂಮಿ ಕಾವಲುಗಾರರು) ಈ ಸಾದಕಿಯರ ಕಾರ್ಯಗಳನ್ನು ಶ್ಲಾಘಿಸಿ ಗೌರವಿಸಿ ಸನ್ಮಾನಿಸಿದರು.
ಮಹಿಳೆಗೆ ಸರಿಸಾಟಿ ಯಾರು ಇಲ್ಲ, ಮಹಿಳೆ ಕಲಿತರೆ ಶಾಲೆ ತೆರೆದಂತೆ. ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ತಮ್ಮಲ್ಲಿನ ಕೀಳರಿಮೆ ತೊರೆದು ಸಮಾಜದ ಒಳಿತಿಗೆ ದುಡಿಯಬೇಕು. ಮಹಿಳೆ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಬೇಕು ಎಂದು ಹೇಳಿದರು.
ಮಹಿಳೆಯಲ್ಲಿ ಹದುಗಿದ ಶಕ್ತಿ, ಸಮಾನತೆ ಸಾರ ಬಿಂಬಿಸಬೇಕು, ಪರಿಶ್ರಮ, ಆತ್ಮ ವಿಶ್ವಾಸ, ನಂಬಿಕೆ, ದೃಡ ವಿಶ್ವಾಸ,
ದಿಟ್ಟತನ, ಗುರಿಯನ್ನು ಮೈಗೊಡಿಸಿಕೊಳ್ಳಬೇಕು ಎಂದು ಹರೀಶ್ ಗೌಡ ಸಲಹೆ ನೀಡಿದರು.
ಈ ಸಂದರ್ಭದಲ್ಲಿ
ಮೈಸೂರು ಯುವ ಬಳಗದ ಅಧ್ಯಕ್ಷರಾದ ನವೀನ್, ರಾಕೇಶ್ ಭಟ್,
ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರವಿಚಂದ್ರ,
ಸಂದೀಪ್ ,ಮಾದೇವ್ ,ಶಾಂತ, ಮಂಗಳ, ಹರೀಶ್ ಗೌಡ, ನಂಜುಂಡಿ, ಲೋಕೇಶ್ ,ಹೇಮಂತ್ ,ಈರೇಗೌಡ ,ಶ್ರೀಕಾಂತ್, ಪಾಪು ಮುಂತಾದರು ಉಪಸ್ಥಿತರಿದ್ದರು
