ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವತಿಯಿಂದ ಗುರುವಾರ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ವಾರ್ಷಿಕ ಆತ್ಲೆಟಿಕ್ ಕ್ರೀಡಾಕೂಟ ಏರ್ಪಡಿಸಿತ್ತು.
ಕ್ರೀಡಾಕೂಟದ ಉದ್ಘಾಟನೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಎಂ.ಕೆ ಸವಿತಾ ಅವರು ವಿದ್ಯಾರ್ಥಿಗಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಕ್ರೀಡೆಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕ್ರೀಡೆಗಳು ನಮ್ಮ ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸು ಶಾಂತವಾಗಿಡಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಗೆಲುವು, ಸೋಲನ್ನು ಒಪ್ಪಿಕೊಳ್ಳುವ ಮನೋಭಾವ, ಜೊತೆಯಲ್ಲಿ ಜಯವನ್ನು ಸಾಧಿಸಿದಾಗ ಅತಿಶಯೋಕ್ತಿಯಿಲ್ಲದೆ ಆನಂದಿಸುವುದನ್ನು ಕ್ರೀಡೆ ಕಲಿಸುತ್ತದೆ, ಕ್ರೀಡೆಗಳು ನಮ್ಮಲ್ಲಿ ತಂಡದ ಭಾವನೆ, ಸಹಕಾರ, ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ.ಹಾಗಾಗಿ, ನಾವೆಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿ, ನಮ್ಮ ಜೀವನವನ್ನು ಸುಂದರವಾಗಿಸೋಣ ಎಂದು
ಎಂ.ಕೆ ಸವಿತಾ ಅವರು ಕರೆ ನೀಡಿದರು.
ವಿಶೇಷ ಆಹ್ವಾನಿತರಾಗಿದ್ದ ನಿವೃತ್ತ ಅಥ್ಲೇಟಿಕ್ ತರಬೇತಿದಾರರಾದ
ಪ್ರಭಾಕರ್ ಜಿ.ಆರ್ ಮಾತನಾಡಿ, ಪ್ರತಿಯೊಬ್ಬರಿಗೂ ಯಾವುದೇ ಇಲಾಖೆಯಲ್ಲೂ ಜವಾಬ್ದಾಯಾಗಿ ಕರ್ತವ್ಯವನ್ನು ನಿರ್ವಹಿಸಲು ದೈಹಿಕ ಸಾಮರ್ಥ್ಯ ಮುಖ್ಯ. ಹಾಗಾಗಿ ದಿನಕ್ಕೆ 1/2 ಗಂಟೆಯಾದರೂ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಶುಪಾಲರಾದ ಪ್ರೊ. ಅಬ್ದುಲ್ ರಹಿಮಾನ್ ಎಂ. ಅಧ್ಯಕ್ಷೀಯ ಭಾಷಣ ಮಾಡಿ ಕ್ರೀಡೆಯಲ್ಲಿ ಎಲ್ಲರು ಹೆಚ್ಚಾಗಿ ಭಾಗವಹಿಸಬೇಕೆಂದು ತಿಳಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿ, ಕ್ರೀಡೆ ಬೆಳೆಯಬೇಕು, ಬೆಳೆಸಬೇಕು ಎಂದು ತಿಳಿಸಿದರು.
ಐ.ಕ್ಯೂ.ಎ.ಸಿ ಸಂಚಾಲಕರಾದ
ಡಾ. ನಂದಕುಮಾರ್.ವಿ, ಪತ್ರಾಂಕಿತ ವ್ಯವಸ್ಥಾಪಕರಾದ ಮೀನಾಕ್ಷಿ ಆರ್, ಕಾಲೇಜಿನ ಎಲ್ಲ ಅಧ್ಯಾಪಕರು, ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದು ಕ್ರೀಡೆಗೆ ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಸಹಾಯಕ ಪ್ರಾಧ್ಯಾಪಕಿ
ಚಂದ್ರಕಲಾ,ಪ್ರಾಧ್ಯಾಪಕ ಡಾ. ರವಿಶಂಕರ್ ಡಿ. ಕೆ. ವಂದಿಸಿದರು.
ವಾರ್ಷಿಕ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 100ಮೀಟರ್ ಓಟದ ಸ್ಪರ್ಧೆಯಲ್ಲಿ ಬಿಂದು ಪ್ರಥಮ, ಜರೀನಾ ಜೇ ದ್ವಿತೀಯ ,ಸಿಂಚನ ತೃತೀಯ ಸ್ಥಾನ ಗಳಿಸಿದ್ದಾರೆ.
200ಮೀ- ಲಕ್ಷ್ಮಿ ಕೆ,ಎಸ್, ರಕ್ಷಿತ ಹೆಚ್.ಕೆ, ಪ್ರಕೃತಿ ಹೆಚ್.ಕೆ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
400ಮೀ- ಭುವನಾ,ಐಶ್ವರ್ಯ,ನಯನ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
800ಮೀ- ಲಕ್ಷ್ಮಿ ಕೆ,ಎಸ್,ಸಹನ.ಎಸ್.ಪಿ,
ಪೊನ್ನಮ್ಮ ಸಿ.ಎನ್ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
4*100- ಲಕ್ಷ್ಮಿ ಕೆ,ಎಸ್,ತೇಜಸ್ವಿನಿ.ಹೆಚ್.ವಿ, ಅಫ್ರೀನಾ, ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ಜಾವಲಿನ್ ಎಸೆತ- ಶಮಿತ, ಜರೀನಾ.ಜೆ, ರಕ್ಷಿತ ಹೆಚ್.ಕೆ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ಗುಂಡು ಎಸೆತ- ರಮ್ಯ.ಡಿ,ಪೊನ್ನಮ್ಮ ಸಿ.ಎನ್,ಮಾಧುರಿ.ಜಿ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ತಟ್ಟೆ ಎಸೆತ- ಸಿಂಚನಾ .ಎಮ್ ಎಸ್, ರಮ್ಯ.ಡಿ, ಸಾಕ್ಷಿ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ಅಧ್ಯಾಪಕರುಗಳಿಗೆ ಆಯೋಜಿಸಲಾದ ಸ್ಪರ್ಧೆಗಳಲ್ಲಿ 50 ವರ್ಷ ಮೇಲ್ಪಟ್ಟವರು-
100 ಮೀ- ಡಾ.ರವಿಶಂಕರ್.ಡಿ.ಕೆ,
ಡಾ.ಪರಶಿವಮೂತಿ೯,ಡಾ.ಶ್ರೀನಿವಾಸ್ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
50 ವರ್ಷ ಕೆಳಪಟ್ಟವರು; ಪ್ರದೀಪ್ ಕುಮಾರ್, ಶಶಿಕುಮಾರ್.ಎಸ್,ಡಾ.ಕೆ.ಎಸ್ ರಘುನಂದನ್ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
100 ಮೀ: ಗೀತಾ.ಡಿ, ಡಾ.ವೀಣಾ.ಎಮ್, ಕವಿತಾ.ಕೆ.ಆರ್ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ಗುಂಡು ಎಸೆತ- ಪುರುಷ ಸೋಮಶೇಕರ್.ಪಿ, ಲೋಕೆಶ್.ಟಿ.ವಿ, ಪ್ರದೀಪ್ ಕುಮಾರ್ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ಗೀತಾ.ಡಿ,ಶಾಮಲಾ ಜಿ, ವಿದ್ಯಾ.ಕೆ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ಸಂಗೀತ ಕುರ್ಚಿ – ಗೀತಾ.ಡಿ, ಕಾವೇರಿ, ಶಾಮಲಾ.ಜಿ ಕ್ರಮವಾಗಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಗಳಿಸಿದ್ದಾರೆ.
ಸ್ಪರ್ಧೆಗಳಲ್ಲಿ ವಿಜೇತ ಕ್ರೀಡಾಪಟುಗಳಿಗೆ. ಅಧ್ಯಾಪಕರುಗಳು ಪ್ರಶಸ್ತಿ ನೀಡಿ ಅಭಿನಂದಿಸಿದರು.
