ಮೈಸೂರು: ವಿಶ್ವಕರ್ಮ ಸಮುದಾಯ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚು ಮಹತ್ವ ನೀಡುವ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಡಾ. ಬಿ ಜೆ ವಿಜಯ್ ಕುಮಾರ್ ಸಲಹೆ ನೀಡಿದರು.
ವಿದ್ಯಾರಣ್ಯಪುರಂ ನಲ್ಲಿರುವ ಮೈಸೂರು ಜಿಲ್ಲಾ ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ಜಿಲ್ಲಾಧ್ಯಕ್ಷ ಟಿಂಬರ್ ನಾಗರಾಜು ಹಾಗೂ ಅವರ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಾತನಾಡಿದರು.
ವಿಶ್ವಕರ್ಮ ಸಮುದಾಯದವರು ತಮ್ಮ ಕುಲವೃತ್ತಿಗಳ ಮೂಲಕ ಸಮಾಜಕ್ಕೆ ಸೇವೆ
ಸಲ್ಲಿಸುತ್ತಿದ್ದಾರೆ ಎಂದು ವಿಜಯಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾಸಭಾದ ನಗರ ಅಧ್ಯಕ್ಷರಾದ ಪಿ. ಸಿದ್ದಚಾರ್, ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಯರಾಮಚಾರ್, ಬನ್ನೂರು ಪುರಸಭೆ ಸದಸ್ಯರಾದ ನಾಗರಾಜು, ಕುಟುಂಬ ಮಹಾಸಭಾ ಹಿರಿಯರ ಮುಖಂಡರಾದ ಅರಕೇಶ್ವರಚಾರ್,ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ರಿಷಿ ವಿಶ್ವಕರ್ಮ, ನಾಗೇಶ್ ವಿಶ್ವಕರ್ಮ, ಗಿರೀಶ್, ಸೋಮಣ್ಣ ಹಾಗೂ ಇನ್ನಿತರ ಸಮಾಜದ ಮುಖಂಡರು ಹಾಜರಿದ್ದರು.
