ಮೈಸೂರು: ಮೈಸೂರಿನಲ್ಲಿ ಮತ್ತೊಂದು ಕೊಲೆಯಾಗಿದ್ದು, ರೌಡಿ ಚಟುವಟಿಕೆ ಮಟ್ಟ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಸರಣಿ ಸತ್ಯಾಗ್ರಹ ಮಾಡುವುದಾಗಿ ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಎಚ್ಚರಿಸಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೆ ರೌಡಿಗಳ ಗುಂಪು ಮತ್ತೊಬ್ಬ ಯುವಕನನ್ನು ಕೊಲೆ ಮಾಡಿರುವ ಹೇಯ ಕೃತ್ಯ ನಡೆದಿರುವುದು ದುರಂತ ಎಂದಿದ್ದಾರೆ.
ಮೈಸೂರಿನ ಪಬ್ ಒಂದರಲ್ಲಿ ತಡರಾತ್ರಿಯಲ್ಲಿ ಈ ಘಟನೆ ನಡೆದಿದಿದ್ದು,ಗೋಕುಲಂ ನಿವಾಸಿ ನಿಶಾಂತ್ ( 32) ಕೊಲೆಯಾದ ದುರ್ದೈವಿ.
ಪಬ್ ನಲ್ಲಿ ಪಾರ್ಟಿ ಮುಗಿಸಿ ಹೊರಬರುವಾಗ ಘಟನೆ ನಡೆದಿದೆ,ಮೃತ ನಿಶಾಂತ್, ಸಂದೀಪ್, ದೀಕ್ಷಿತ್ ಮೂವರು ಪಬ್ ನಲ್ಲಿ ಪಾರ್ಟಿ ಮಾಡಿ ಹೊರ ಬರುವ ವೇಳೆ ಎದುರಾಗಿದ್ದ ಟ್ಯಾಂಕ್ ರಾಕಿ ಸಹಚರರು ಕ್ಷುಲ್ಲಕ ವಿಚಾರಕ್ಕೆ ನಿಶಾಂತ್ ಸ್ನೇಹಿತರು ಟ್ಯಾಂಕ್ ರಾಕಿ ಸಹಚರರ ನಡುವೆ ಗಲಾಟೆ ನಡೆಸಿದ್ದಾರೆ.
ಇದೇ ವೇಳೆ ಪಬ್ ನ ಎರಡನೇ ಮಹಡಿಯಲ್ಲಿದ್ದ ನಿಶಾಂತ್ ಗೆ ಹಲ್ಲೆ ನಡೆಸಿದಾಗ ಆತ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ
ಈ ರೀತಿಯ ಘಟನೆಯಿಂದ ಮೈಸೂರಿನ ಜನತೆಗೆ ಆತಂಕ ಉಂಟಾಗಿದೆ ವಾರಕ್ಕೊಮ್ಮೆ ರೌಡಿ ಪೆರೇಡ್ ಮಾಡಬೇಕು ಮತ್ತು ರೌಡಿ ಪಟ್ಟಿ ಇರುವವರ ಸಹಚರರ ಮೇಲೆ ನಿಗಾವಹಿಸಬೇಕು ಎಂದು ತೇಜಸ್ವಿ ಪೋಲಿಸ್ ಇಲಾಖೆ ಮನವಿ ಮಾಡಿದ್ದಾರೆ.
ಕೂಡಲೇ ಪೋಲಿಸ್ ಇಲಾಖೆ ಹತ್ಯೆ ಮಾಡಿ ತಲೆಮರೆಸಿ ಕೊಂಡಿರುವವರನ್ನು ಬಂಧಿಸಬೇಕು,ಎಲ್ಲರ ಮೇಲೆ ರೌಡಿ ಪಟ್ಟಿ ತೆರೆದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯಿಸಿದ್ದಾರೆ.
ಘಟನೆ ನಡೆದ ಪಬ್ ನ ಪರವಾನಗಿ ರದ್ದು ಮಾಡಿ ಪಬ್ ನ ವ್ಯಸ್ಥಪಕರ ನಿರ್ಲಕ್ಷ್ಯ ಕಂಡುಬಂದಲ್ಲಿ ಅವರ ಮೇಲೂ ಮತ್ತು ಮಾಲಿಕರ ಮೇಲೂ ಸಹ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
