ಮೈಸೂರು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮಾಜಿ ರೌಡಿ ಹಾಗೂ ಗುತ್ತಿಗೆದಾರನ ಕೊಲೆಗೆ ಸುಪಾರಿ ನೀಡಿ, ಅಪಘಾತದ ನೆಪದಲ್ಲಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು,ಐದು ಮಂದಿಯನ್ನು ಬಂಧಿಸಲಾಗಿದೆ
ಜಿಮ್ ಸಲೀಂ, ಸೈಯದ್ ಸೂಫಿಯಾನ್, ಜಿಯಾ, ಸಲ್ಮಾನ್ ಮತ್ತು ಸಮೀರ್ ಬಂಧಿತ ಆರೋಪಿಗಳು.
ನಂಜನಗೂಡು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಗುತ್ತಿಗೆದಾರ ಧನರಾಜ್ ಭೋಲಾ ಅಪಾಯದಿಂದ ಪಾರಾಗಿದ್ದಾರೆ
ಲಾರಿಯಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಲು
ಲಾರಿ ಚಾಲಕ ಸೈಯದ್ ಸೂಫಿಯಾನ್ಗೆ
2 ಲಕ್ಷ ರೂ. ಸುಪಾರಿ ನೀಡಿದ್ದು, ಒಂದೇ ಸಮಯದಲ್ಲಿ ಎರಡು ಬಾರಿ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಲಾಗಿದೆ.
ಆರೋಪಿಗಳ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಂಚು ಬಯಲಾಗಿದೆ.
ಪ್ರಕರಣ ಸಂಬಂಧ ನಂಜನಗೂಡು ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
