ಪಿರಿಯಾಪಟ್ಟಣ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪಿರಿಯಾಪಟ್ಟಣ ತಾಲೂಕು ವತಿಯಿಂದ ಹಾರನಹಳ್ಳಿ ಗ್ರಾಮದಲ್ಲಿ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಸಮಾರಂಭ ಮತ್ತು ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ವೇಳೆ ಹಲವಾರು ಮಂದಿ ಸಂಘಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಆರ್ ಮಂಜುನಾಥ್ ಗೌಡ, ಉಪಾಧ್ಯಕ್ಷರೂ ಮತ್ತು ರಾಜ್ಯ ಯುವ ಘಟಕದ ಅಧ್ಯಕ್ಷರಾದ ಕೆ ಎಸ್ ಸೋಮಶೇಖರ್, ಪಿರಿಯಾಪಟ್ಟಣ ಯುವ ಘಟಕದ ಅಧ್ಯಕ್ಷರು ಪಿ.ಎಂ ಮಹದೇವ್, ತಾಲೂಕು ಅಧ್ಯಕ್ಷ ಪ್ರಕಾಶ್, ತಾಲೂಕು ಉಪಾಧ್ಯಕ್ಷ ಪ್ರಭು, ತಾಲೂಕು ಸದಸ್ಯರು ಕೊಣಸೂರು ಶಿವರಾಜ್, ರಾಜ್ಯ ಸದಸ್ಯ ದೇವಶಟ್ರು, ಸಿಗೋರ್ ನಾಗೇಂದ್ರ, ಮೋಹನ್ ಮತ್ತಿತರರು ಹಾಜರಿದ್ದರು.
