ಮಂಡ್ಯ/ಮೇಲುಕೋಟೆ: ಮೇಲುಕೋಟೆಯಲ್ಲಿ ವಿಶ್ವಪ್ರಸಿದ್ದ ಪುರಾಣ ಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವ ಲಕ್ಷಾಂತರ ಮಂದಿ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿದೆ.
ರಾಜ್ಯದ ಮತ್ತು ನೆರೆ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತ ಸಾಗರವೇ ಮೇಲುಕೋಟೆಗೆ ಹರಿದು ಬಂದಿದೆ.ಚೆಲುವ ನಾರಾಯಣ ಸ್ವಾಮಿ ದೇವಾಲಯವನ್ನು ಬಗೆ ಬಗೆಯ ಹೂಗಳು ಮತ್ತು ಹಣ್ಣುಗಳಿಂದ ಅದ್ಬುತವಾಗಿ ಅಲಂಕಾರ ಮಾಡಲಾಗಿದೆ.
ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಹೆಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ.
ಚೆಲುವನಾರಾಯಣ ಸ್ವಾಮಿಯ ಶ್ರೀ ವೈರಮುಡಿ ಬ್ರಹ್ಮೋತ್ಸವ ಇಂದಿನಿಂದ ಪ್ರಾರಂಭವಾಗಿದ್ದು, ಗುರುವಾರದ ತನಕ ಜಾತ್ರಾ ಮಹೋತ್ಸವ ಇರಲಿದೆ.
ರತ್ನ ಖಚಿತ ಚಿನ್ನದ ವೈರಮುಡಿಯನ್ನು ಎಸ್ ಪಿ ಮತ್ತು ಡಿಸಿ ಅವರ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಖಜನೆಯಿಂದ ದೇವಾಲಯಕ್ಕೆ ತಂದು ನಂತರ ಉತ್ಸವವನ್ನು ನೆರವೇರಿಸಲಾಯಿತು.
ಈ ಮೊದಲೇ ಸಚಿವ ಚಲುವರಾಯಸ್ವಾಮಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದರು.
