ಯಳಂದೂರು: ಯಳಂದೂರು ತಾಲ್ಲೂಕು
ಮದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ 2.27 ಲಕ್ಷ ನಿವ್ವಳ ಲಾಭ ಬಂದಿದೆ
ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್ ಬಾಲರಾಜ್ ತಿಳಿಸಿದರು.
ಮದ್ದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸ್ವ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪನೆ ಮಾಡುವ ಮೂಲಕ ಮದ್ದೂರು ಬೂದಿತಿಟ್ಟು ಮಲ್ಲಿಗಳ್ಳಿ ಗ್ರಾಮದ ರೈತರಿಗೆ ಅನೇಕ ರೀತಿಯಲ್ಲಿ ಅನುಕೂಲ ಕಲ್ಪಿಸಲಾಗಿದೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಸದಸ್ಯರು ಸಂಘವನ್ನು ಬೆಳೆಸುವ ಮೂಲಕ ತಾವು ಸಂಘದಿಂದ ಸಾಲ ಸೌಲಭ್ಯ ಪಡೆದು ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಬಿ.ಪಿ.ಪುಟ್ಟಮಾದಪ್ಪ ಜಗದೀಶ್ ಅವರು ಮಾತನಾಡಿ ನಮ್ಮ ಸಂಘದಲ್ಲಿ 125 ಜನ ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗಿದ್ದು ಅಲ್ಲದೆ ಎಲ್ಲಾ ಷೇರುದಾರರ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ, ನಮ್ಮ ಸಂಘ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತೆ ಸಹಕಾರ ಸಂಘದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್ ಅವರು ವಾರ್ಷಿಕ ವರದಿ ಮಂಡನೆ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ನಂಜುಂಡಸ್ವಾಮಿ, ನಿರ್ದೇಶಕರುಗಳಾದ ಬಿ.ಎಸ್ ನಾಗರಾಜ್, ಬಿ ಎಂ. ಬೋಜರಾಜು, ಚಿಕ್ಕಬಸವಯ್ಯ, ಪುಟ್ಟರಂಗಶೆಟ್ಟಿ, ಬಿ.ಪುಟ್ಟಸ್ವಾಮಿ. ಅಯ್ಯಪ್ಪ ಸ್ವಾಮಿ, ಬಿ ಕೆ ಸತೀಶ್, ಹೂವಮ್ಮ, ಲಕ್ಷ್ಮಮ್ಮ, ರಾಜಮ್ಮ, ಹಿರಿಯ ಮೇಲ್ವಿಚಾರಕರಾದ ಲಿಂಗರಾಜು, ಪುಟ್ಟಣ್ಣ, ಸೇರಿದಂತೆ ಎಲ್ಲಾ ಸದಸ್ಯರು ಸಾರ್ವಜನಿಕರು ರೈತರು ಭಾಗವಹಿಸಿದ್ದರು.
