ಮೈಸೂರು: ಮೈಸೂರಿನ ಇಲವಾಲದಲ್ಲಿರುವ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಲಯನ್ಸ್ ಆಫ್ ಮೈಸೂರು ಎಲೈಟ್ ಸಂಸ್ಥೆಯ ಪಾರ್ಥ ಮತ್ತು ಚಂದ್ರಿಕಾ ಪಾರ್ಥ ಅವರು ಭೇಟಿ ನೀಡಿದರು.
ಈ ವೇಳೆ ಅಧ್ಯಕ್ಷರಾದ ಹನುಮಂತಪ್ಪ, ಕಾರ್ಯದರ್ಶಿ ಸುರೇಶ್ ಅವರು ಆಶ್ರಮದ ತಾಯಂದಿರಿಗೆ ದಿನಸಿ ಪದಾರ್ಥಗಳು ಹಾಗೂ ತರಕಾರಿ ವಿತರಣೆ ಮಾಡಿದರು.
ಪಿ ಜಿ ಆರ್ ಎಸ್ ಎಸ್ ಬೃಂದಾವನದ ಅಧ್ಯಕ್ಷರಾದ ಯಾದವ್ ಹರೀಶ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ರಕ್ತದಾನಿ ಮಂಜು ಅವರು ಎಲ್ಲಾ ನಿರ್ದೇಶಕರ ಪರವಾಗಿ ಲಯನ್ಸ್ ಆಫ್ ಮೈಸೂರು ಎಲೈಟ್ ಸಂಸ್ಥೆಯವರಿಗೆ ಧನ್ಯವಾದ ತಿಳಿಸಿದರು.
