ಕೆ.ಆರ್.ಪೇಟೆ: ಗೃಹ ಬಳಕೆ ಸಿಲಿಂಡರ್ ಸಿಗುವುದಿಲ್ಲ ಎಂದು ಏಕಾಏಕಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಜಮಾಯಿಸಿ ನೂಕಾಟ ತಳ್ಳಾಟ ಮಾಡಿದ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.
ಏನೂ ಮಾಡಲು ತೋಚದೆ ಕೊನೆಗೆ ಏಜೆನ್ಸಿ ಮಾಲೀಕರು ಪೊಲೀಸ್ ಠಾಣೆಯ ಮುಂದೆ ಲಾರಿ ನಿಲ್ಲಿಸಿ ಪೊಲೀಸರ ರಕ್ಷಣೆಯಲ್ಲಿ ಸಿಲಿಂಡರ್ ವಿತರಣೆ ಮಾಡಬೇಕಾಯಿತು.
ಕೆ.ಆರ್ ಪೇಟೆ ಪಟ್ಟಣದ ಮಂಜುನಾಥ್ ಏಜೆನ್ಸಿ ಎಂದಿನಂತೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲು ಗೊಡೋನ್ ಬಾಗಿಲು ತೆರದಿತ್ತು.
ಆಗ ಏಕಾಏಕಿ ನೂರಾರು ಜನರು ಸಿಲಿಂಡರ್ ತೆಗೆದುಕೊಳ್ಳಲು ಬಂದಿದ್ದಾರೆ. ಈ ವೇಳೆ ಸಿಲಿಂಡರ್ ಎಲ್ಲಿ ಖಾಲಿಯಾಗುತ್ತದೆ ಎಂದುಕೊಂಡು ಜನರು ಗೊಡೋನ್ಗೆ ಮುಗಿಬಿದ್ದರು.
ಈ ವೇಳೆ ಏಜೆನ್ಸಿಯವರಿಗೆ ಸಿಲಿಂಡರ್ ವಿತರಣೆ ಮಾಡಲು ಕಷ್ಟವಾಗಿದ್ದು, ಜನರಲ್ಲಿ ನೂಕು ನುಗ್ಗಲು ಉಂಟಾಗಿದೆ.
ಬಳಿಕ ಏಜೆನ್ಸಿ ಮಾಲೀಕರು ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಸಿಲಿಂಡರ್ ಲಾರಿಯನ್ನ ನಿಲ್ಲಿಸಿಕೊಂಡು ಪೊಲೀಸರ ಸಮ್ಮುಖದಲ್ಲಿ ಗ್ರಾಹಕರಿಗೆ ಸಿಲಿಂಡರ್ ವಿತರಿಸಿದರು.
