ಮೈಸೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ವತಿಯಿಂದ ಆದಿ ಗುರು ಶಂಕರಾಚಾರ್ಯರು ಮತ್ತು ಭಗವತ್ ರಾಮಾನುಜಾಚಾರ್ಯರ ಜಯಂತಿ ಆಚರಿಸಲಾಯಿತು.
ವಿದ್ಯಾರಣ್ಯಪುರಂನಲ್ಲಿರುವ ಕಚೇರಿಯಲ್ಲಿ ಆದಿ ಗುರು ಶಂಕರಾಚಾರ್ಯರು ಮತ್ತು ಭಗವತ್ ರಾಮಾನುಜಾಚಾರ್ಯರ ಭಾವಚಿತ್ರಕ್ಕೆ ನಗರ ಪಾಲಿಕೆ ಮಾಜಿ ಸದಸ್ಯ ಮ ವಿ ರಾಮ್ ಪ್ರಸಾದ್ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು,
ವಿಪ್ರ ಸಮುದಾಯಕ್ಕೆ ಪದೇ ಪದೇ ಅವಮಾನಿಸಿ ವಿಕೃತಿ ಮರೆಯುತ್ತಿರುವವರ ವಿರುದ್ಧ ಕ್ರಮ ಏಕಿಲ್ಲ ಎಂದು ಕಿಡಿ ಕಾರಿದರು.
ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕೃಪಾ ನಿಧಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಸೂಚನೆಯ ನಿಯಮಗಳನ್ನು ಉಲ್ಲಂಘಿಸಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಅವಮಾನ ಮಾಡಿರುವುದು ಆಕ್ಷಮ್ಯ ಎಂದು ಹೇಳಿದರು.
ಕಳೆದ ವರ್ಷ ಇದೇ ರೀತಿ ರಾಜ್ಯದ ಹಲವು ಕಡೆ ನಡೆದ ಘಟನೆಗಳನ್ನು ಖಂಡಿಸಿದಾಗ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ಬಾರಿ ಘಟನೆಗಳು ಮರುಕಳಿಸಬಾರದೆಂದು ಕಠಿಣ ಆದೇಶ ಹೊರಡಿಸಿದಾಗಲೂ ಕೂಡ ಕೆಲವು ವಿಕೃತ ಮನಸ್ಸಿನ ಪರೀಕ್ಷಾ ಸಿಬ್ಬಂದಿಗಳಿಂದ ಈ ರೀತಿ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನನ್ನು ತಮ್ಮ ಅಣತಿಯಂತೆ ನಡೆಯಲು ಪ್ರಚೋದಿಸಿ ಮತ್ತು ವಿಕೃತ ಮನಸ್ಸು ಪ್ರದರ್ಶಿಸುತ್ತಿರುವ ಇಂತಹ ಸಿಬ್ಬಂದಿಗಳ ವಿರುದ್ಧ ಕಾನೂನು ರೀತಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಮ.ವಿ.ರಾಮಪ್ರಸಾದ್ ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಬ್ರಾಹ್ಮಣರ ಧಾರ್ಮಿಕ ಭಾವನೆಗಳ ಮೇಲೆ ಚೆಲ್ಲಾಟವಾಡುವವರನ್ನು ನಿಯಂತ್ರಿಸಬೇಕು ಮತ್ತು ಇಂತಹ ತಪ್ಪು ಮರುಕಳಿಸಿದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು
ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,
ಗೌರವ ಅಧ್ಯಕ್ಷ ಎನ್ ಲಕ್ಷ್ಮಿಶ, ಅಧ್ಯಕ್ಷರಾದ ಸಂತೋಷ್ ಕುಮಾರಿ ಎಸ್ ದೇಶಕ್ ,
ಉಪಾಧ್ಯಕ್ಷ ಗಣೇಶ್ ಎಂ.ವಿ ,
ಪ್ರಧಾನ ಕಾರ್ಯದರ್ಶಿ ರವಿಶಂಕರ್,
ಕಾರ್ಯದರ್ಶಿ ಮುರಾರಿ ಭಟ್,
ಸಹ ಕಾರ್ಯದರ್ಶಿ ರವೀಂದ್ರ ಕೆ.ಆರ್,
ಕಚೇರಿ ಕಾರ್ಯದರ್ಶಿ ಕೆ ಎಲ್ ವಿ ಶರ್ಮ ,
ಸಂಘಟನಾ ಕಾರ್ಯದರ್ಶಿ ಸುರೇಶ್ ಕೆ.ವಿ,
ಹಾಗೂ ನಿರ್ದೇಶಕ ಸಂತೋಷ್ ಕೆ ಎಸ್ ,ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.
