ಅಹಮದಾಬಾದ್: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಭಾರತ ನ್ಯೂಜಿಲ್ಯಾಂಡ್ ನಡುವಿನ ಟಿ 20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಕಪ್ಪನ್ನು ಮುಡಿಗೇರಿಸಿಕೊಂಡು ಕೋಟ್ಯಂತರ ಅಭಿಮಾನಿಗಳ ಮನಸೂರೆಗೊಂಡಿತು.
ಮೊದಲು ಬ್ಯಾಟ್ ಮಾಡಿದ ಇಂಡಿಯಾ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತು.
ನಂತರ ನ್ಯೂಜಿಲೆಂಡ್ ತಂಡ ಆಟ ಪ್ರಾರಂಭಿಸಿ ಕೆಲ ಸಮಯದಲ್ಲೇ 2 ವಿಕೆಟ್ ಕಳೆದುಕೊಂಡಿತು.
ನಂತರ ಸುಧಾರಿಸಿತಾದರೂ ಮತ್ತೆ ಮೂರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಭಾರತ ತಂಡದ ಭರ್ಜರಿ ಬೌಲಿಂಗ್,ಫೀಲ್ಡಿಂಗ್ ನಿಂದ ನ್ಯೂಜಿಲೆಂಡ್ ತಂಡ 159 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಒಪ್ಪಿಸಿ ಶರಣಾಯಿತು.
ಭಾರತ ಬ್ಲ್ಯಾಕ್ ಕ್ಯಾಪ್ಸ್ ಮಣಿಸಿ ಮತ್ತೊಂದು ಕಿರೀಟವನ್ನ ಮುಡಿಗೇರಿಸುವಂತೆ ಇಡೀ ಭಾರತದ ಅಭಿಮಾನಿಗಳ ಪ್ರಾರ್ಥನೆ ಹಾರೈಕೆ ಫಲ ಕೊಟ್ಟಿದೆ.ಭಾರತ ಗೆದ್ದು ಬೀಗಿದೆ.
ಭರತದ ಗೆಲುವು ಮೊದಲೇ ಊಹಿಸಿದ ಅಭಿಮಾನಿಗಳು ಇನ್ನೂ ಎರಡು ಓವರ್ ಇರುವಾಗಲೇ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸುತ್ತಿದ್ದರು.
ಅಂತೂ ಭಾರತ T 20 ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಅದ್ಭುತ ವಾಗಿ ಆಡಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿತು.
