ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಕೊಣಸೂರು, ಬಸವನಗರ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪುಟ್ಟ ಮಕ್ಕಳು ಸುಬ್ರಮದಿಂದ ನಾಡಗಿತೆ, ರಾಷ್ಟ್ರಗೀತೆ ಹಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರು ಮತ್ತು ಗ್ರಾಮದ ಶಾಲಾ ಶಿಕ್ಷಕರಾದ ಮಧುರೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಶ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆಯ ಸಂಚಾಲಕರಾದ ಕೊಣಸೂರು ಶಿವರಾಜ್, ಶಾಲಾ ಶಿಕ್ಷಕಿ ರೇಖಾ, ಎಸ್ ಡಿ ಎಂ ಸಿ ಅಧ್ಯಕ್ಷ ಸಣ್ಣ ಸ್ವಾಮಿ,ರೈತ ಸಂಘ ಮತ್ತು ಹಸಿರುಸೇನೆಯ ಕೊಣಸೂರು ಉಪಾಧ್ಯಕ್ಷರಾದ ರಾಜಯ್ಯ ಕೆ.ಬಿ, ರಂಗಸ್ವಾಮಿ, ಮಂಜುನಾಥ, ನವೀನ, ಅಂಗನವಾಡಿ ಟೀಚರ್ ಮಂಜುಳಾ, ಸಹಾಯಕಿ ಭವಾನಿ ರಂಗಸ್ವಾಮಿ ಮತ್ತಿತರರು ಭಾಗಿಯಾಗಿದ್ದರು.
ಧ್ವಜಾರೋಹಣ ನೆರವೇರಿಸಿದ ನಂತರ ಗ್ರಾಮದ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಿಗೆ ಸಿಹಿ ಹಂಚಲಾಯಿತು.
