ಮೈಸೂರು: ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಚೇರಿಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಭಾರತಾಂಬೆಯ ಭಾವಚಿತ್ರ ಇಟ್ಟು ಪೂಜಿಸಿ,ನಂತರ ರಾಷ್ಟ್ರಧ್ವಜಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಖಜಾಂಜಿ ಕೆ ನಾಗರಾಜ್, ನಿರ್ದೇಶಕರುಗಳಾದ ಹೆಚ್ ಎಸ್. ಪ್ರಶಾಂತ್ ತಾತಾಚಾರ್ (ಕಣ್ಣ),
ಎಚ್ ಪಿ ಚೇತನ್, ಎನ್ ಪಣಿರಾಜ್, ವಿಕ್ರಂ ಅಯ್ಯಂಗಾರ್, ಎನ್ ನಾಗಶ್ರೀ, ಕೆ ಎನ್ ಅರುಣ್, ಎಸ್ ರಾಜಮ್ಮ ಹಾಗೂ ಪ್ರಭಾರಿ ಕಾರ್ಯದರ್ಶಿ ಎನ್ ವೀಣಾ ಹಾಗೂ ಸಿಬ್ಬಂದಿ ಹಾಜರಿದ್ದರು.
