ಮೈಸೂರು: ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ರ ಹುಟ್ಟುಹಬ್ಬದ ಪ್ರಯುಕ್ತ ಕೆಎಂಪಿಕೆ ಟ್ರಸ್ಟ್ ಹಾಗೂ ವಿವಿಧ ಸಂಘಟನೆಯ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ದೂರ ರಾಜಣ್ಣ, ಮೈಸೂರಿನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ನಾರಸಯಣ ಗೌಡರು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಧಾರ್ಮಿಕ ಹಾಗೂ ಹೋಟೆಲ್ ಉದ್ಯಮದ ಮೂಲಕ ಸಾವಿರಾರು ಮಂದಿಗೆ ಜೀವನ ಕಟ್ಟಿಕೊಳ್ಳಲು ಪ್ರೇರೆಪಿಸಿ ಮೈಸೂರು ಹೋಟೆಲ್ ಮಾಲೀಕ ಸಂಘದ ಅಧ್ಯಕ್ಷರಾಗಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವಾರು ಯೋಜನೆಗಳಿಗೆ ಸಹಕಾರವನ್ನ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಮೈಸೂರು ದಸರಾ ಯಶಸ್ವಿಗೆ, ಆಹಾರ ಮೇಳ ಸೇರಿದಂತೆ ಮೈಸೂರಿನಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ಅತ್ಯುತ್ತಮ ಸಮನ್ವಯತೆ ಸಾಧಿಸಿ ಅಂತರಾಷ್ಟ್ರಿಯ ಮಟ್ಟದಲ್ಲಿ ಮೈಸೂರಿಗೆ ಪ್ರವಾಸಿಗರನ್ನ ಆಕರ್ಷಿಸಲು ಹೋಟೆಲ್ ಉದ್ಯಮವು ಪ್ರಮುಖವಾಗಲು ಭದ್ರ ಬುನಾಧಿ ಹಾಕಿಕೊಟ್ಟ ಸಿ ನಾರಾಯಣ ಗೌಡರಿಗೆ ಮತ್ತಷ್ಟು ಅಧಿಕಾರ ಸಿಗಬೇಕು, ವಿಧಾನಪರಿಷತ್ ಸದಸ್ಯರಾಗಿ ಕರ್ನಾಟಕ ಸರ್ಕಾರ ನೇಮಕ ಮಾಡಿದರೆ ಮೈಸೂರಿನ ಹಲಾವರು ಕ್ಷೇತ್ರಗಳ ಅಭಿವೃದ್ಧಿ ಸುಗಮವಾಗುತ್ತದೆ ಎಂದು ಹೇಳಿದರು
ವಿವಿಧ ಪಕ್ಷದ ಮುಖಂಡರುಗಳಾದ ನಜರ್ಬಾದ್ ನಟರಾಜ್,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,ಜಿ ರಾಘವೇಂದ್ರ, ರಾಕೇಶ್ ಭಟ್,ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ದೂರ ರಾಜಣ್ಣ,ಶ್ರೀಕಾಂತ್ ಕಶ್ಯಪ್ ,ರಂಗನಾಥ್,ನವೀನ್ ಕೆಂಪಿ,ನಾಗೇಶ್ ಯಾದವ್,ದಯಾನಂದ ನಾಯಕ್,ಅಪೂರ್ವ ಸುರೇಶ್, ಶಿವಲಿಂಗ ಸ್ವಾಮಿ ,ನಿವೃತ್ತ ಶಿಕ್ಷಕ ಮಹದೇವಸ್ವಾಮಿ ಮತ್ತಿತರರು ನಾರಸಯಣ ಗೌಡರಿಗೆ ಶುಭ ಕೋರಿದರು.
