ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135 ನೆ ಜನ್ಮದಿನಾಚರಣೆಯನ್ನು ಸೋಮವಾರ ವೈಭವದಿಂದ ಆಚರಿಸಲಾಯಿತು.
ಹೊನ್ನಿಕುಪ್ಪೆ ಗ್ರಾಮದ ಎಲ್ಲಾ ಜನತೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಧರ್ಮಾತೀತವಾಗಿ ಪಾಲ್ಗೊಂಡು ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದರು.
ರಾತ್ರಿ ಅಂಬೇಡ್ಕರ್ ಅವರ ಭಾವಚಿತ್ರವುಳ್ಳ ಭವ್ಯ ಮೆರವಣಿಗೆಯನ್ನು ಇಡೀ ಗ್ರಾಮದಲ್ಲಿ ಮಾಡಲಾಯಿತು.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಊರಿನ ಗ್ರಾಮಸ್ಥರೊಂದಿಗೆ ಸೇರಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ ಅನ್ನದಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ತಿಳಿಸಿದ್ದಾರೆ.
ಹೊನ್ನಿಕುಪ್ಪೆ ಗ್ರಾಮದಯಜಮಾನರು,
ಮುಖಂಡರು ಸೇರಿದಂತೆ ಮಕ್ಕಳಾದಿಯಾಗಿ ಎಲ್ಲರೂ ಈ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಉದ್ದಕ್ಕೂ ಯುವಕರು,ಮಕ್ಕಳು ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
