(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅವ್ಯವಸ್ಥೆಯ ಆಗರವಾಗಿದ್ದು ಇದಕ್ಕೆ ಕೊಠಡಿಯ ಕುರ್ಚಿಯ ಮೇಲೆ ಒಳ ಉಡುಪುಗಳನ್ನು ಒಣಗಿ ಹಾಕಿರುವುದು ಸಾಕ್ಷಿಯಾಗಿದೆ.
ಇದನ್ನೆಲ್ಲ ನೋಡಿದರೆ ಇಲ್ಲಿನ ಅಧಿಕಾರಿಯ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದಿಲೀಪ್ ಸಿದ್ದಪ್ಪಾಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಚೇರಿಯ ಮೇಲ್ಭಾಗದಲ್ಲಿರುವ ಸಹಾಯಕ ನಿರ್ದೇಶಕರಿಗೆ ಸಂಬಂಧಪಟ್ಟ ಕೊಠಡಿ ಒಂದರ ಕುರ್ಚಿಯ ಮೇಲೆ ಬನಿಯನ್ ಹಾಗೂ ಚಡ್ಡಿಯನ್ನು ಒಣಗಿ ಹಾಕಲಾಗಿದೆ. ಇದನ್ನು ನೋಡಿದರೆ ಇಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೊ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
ಕೂಡಲೇ ಒಳ ಉಡುಪು ತೆರವುಗೊಳಿಸಿ ಸ್ವಚ್ಛವಾಗಿ ಇಟ್ಟು ಕೊಂಡರೆ ಒಳ್ಳೆಯದು.ಇದರಿಂದ ಕಚೇರಿಗೆ ಬರುವ ಸಾರ್ವಜನಿಕರಿಗೂ ಕೂಡ ಒಂದು ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಅದನ್ನು ಬಿಟ್ಟು ಅಧಿಕಾರಿ ಕುಳಿತುಕೊಳ್ಳುವ ಕುರ್ಚಿಯ ಮೇಲೆ ಬನಿಯನ್ ಹಾಗೂ ಚಡ್ಡಿಯನ್ನು ಒಣಗಿ ಹಾಕುವುದು ಇಲ್ಲಿನ ಅಧಿಕಾರಿಯ ಮೇಲೆ ಕಚೇರಿಯ ಸಿಬ್ಬಂದಿಗಳಿಗೆ ಇರುವ ಅಸಡ್ಡೆಯನ್ನು ತೋರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಬದಲಾಗಿ ಹೊಸ ನಾಯಕರು ಅಧಿಕಾರ ವಹಿಸಿ ಕೊಂಡಿದ್ದರೂ ಸಹಾ ಕಚೇರಿಯ ಗೋಡೆಗಳ ಮೇಲೆ ಹಿಂದಿನ ಸರ್ಕಾರದಲ್ಲಿದ್ದ ಹಳೆಯ ಬಿತ್ತಿ ಪತ್ರಗಳನ್ನೇ ಅಂಟಿಸಿಕೊಂಡಿದ್ದಾರೆ,ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಷ್ಟರ ಮಟ್ಟಿಗೆ ಜವಾಬ್ದಾರಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಇದೂ ಒಂದು ಉದಾಹರಣೆ ಎಂದು ಅವರು ಟೀಕಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಯವರು ಕಚೇರಿಗೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಇಲ್ಲಿನ ಕಚೇರಿಯ ಸಿಬ್ಬಂದಿಗಳನ್ನು ಕೇಳಿದರೆ ಅವರು ಯಳಂದೂರಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಯಳಂದೂರು ಕಚೇರಿಯ ಸಿಬ್ಬಂದಿಯನ್ನು ಫೋನ್ ಮಾಡಿ ಕೇಳಿದರೆ ಅವರು ಬಂದಿಲ್ಲ ಬೇರೆ ಕಡೆ ಹೋಗಿದ್ದಾರೆ ಎಂದು ಹೇಳುತ್ತಾರೆ ಹಾಗಾಗಿ ಅವರು ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ, ಒಂದು ವೇಳೆ ಅವರು ಬೇರೆ ಹೋಗಬೇಕಾದರೆ ಯಾರಿಗಾದರೂ ಇಂಚಾರ್ಜ್ ನೀಡಿ ಹೋಗಬೇಕು ಜತೆಗೆ ಎಲ್ಲಿ ಹೋಗುತ್ತಾರೆ ಎಂಬುದನ್ನು ನೋಟಿಸ್ ಬೋರ್ಡ್ ನಲ್ಲಿ ಅಂಟಿಸಬೇಕು.ಇಲ್ಲಿ ಇದ್ಯಾವುದೂ ಕಾಣುತ್ತಿಲ್ಲ ಎಂದು ದಿಲೀಪ್ ಸಿದ್ದಪ್ಪಾಜಿ ಆರೋಪಿಸಿದರು.
ಇವರ ಕಾರ್ಯವೈಖರಿಯನ್ನು ನೋಡಿದರೆ ನಮಗೆ ಏಕೋ ಅನುಮಾನ ವ್ಯಕ್ತವಾಗುತ್ತಿದೆ ಇವರು ಅಧಿಕಾರಿಯೋ ಅಥವಾ ಇನ್ನೇನು ಎಂಬುದು ಗೊತ್ತಾಗುತ್ತಿಲ್ಲ,ಕೂಡಲೇ ಈ ಹಳೆಯ ಬಿತ್ತಿ ಪತ್ರಗಳನ್ನು ತೆರವುಗೊಳಿಸಿ ನೂತನ ಸರ್ಕಾರದ ಮುಖ್ಯಮಂತ್ರಿಗಳ ಭಾವಚಿತ್ರ ಇರುವ ಬಿತ್ತಿಪತ್ರಗಳನ್ನು ಅಂಟಿಸಬೇಕೆಂದು ಅವರು ಆಗ್ರಹಿಸಿದರು.

