ಮೈಸೂರು: ವಿದ್ಯಾಭ್ಯಾಸದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು,ವಿಧ್ಯಾರ್ಥಿಗಳಿಗೆ ಮೈಸೂರು ಯುವ ಬಳಗದ ಯುವಕರು ಗುಲಾಬಿ ಹೂ ಪೆನ್ ನೀಡಿ ಶುಭ ಹಾರೈಸಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುತ್ತಿರುವ ವಿಧ್ಯಾರ್ಥಿಗಳಿಗೆ ಯುವಕರು ಗುಲಾಬಿ ಹೂ ಮತ್ತು ಪೆನ್ ನೀಡಿ ಗುಡ್ ಲಕ್ ಹೇಳಿದರು.
ಮೈಸೂರಿಗೆ ಉನ್ನತ ಫಲಿತಾಂಶ ಬರಲಿ,ನಿಮ್ಮೊಂದಿಗೆ ನಾವಿದ್ದೇವೆ ಎಂದು ಹಾರೈಸಿ ಅಭಯ ನೀಡಿದರು.
ಈ ವೇಳೆ ಮುಡಾ ಮಾಜಿ ಸದಸ್ಯರಾದ ನವೀನ್ ಕುಮಾರ್ ಮಾತನಾಡಿ,
ಪರೀಕ್ಷೆ ಸಂಭ್ರಮದಿಂದ ಎದುರಿಸಿ ದೈರ್ಯದಿಂದ ಬರೆಯಿರಿ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಭ್ರಮದಿಂದ ಬರೆದರೆ ನಿರೀಕ್ಷೆಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು
ವಿದ್ಯಾರ್ಥಿಗಳು ಪರೀಕ್ಷೆ ಶತ್ರು ಎಂದು ಪರಿಗಣಿಸಿದರೆ ವರ್ಷವಿಡೀ ಕಲಿತ ಪಾಠಗಳೆಲ್ಲ ಮರೆತು ಹೋಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಪರೀಕ್ಷೆ ಭೂತ ಎಂದುಕೊಳ್ಳಬೇಡಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಎಂದು ಮಕ್ಕಳಿಗೆ ಪೋಷಕರು ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಸಂಕುಚಿತ ಮನೋಭಾವದಿಂದ ಸುಮ್ಮನೆ ಕುಳಿತರೆ ಆತ್ಮವಂಚನೆ
ಮಾಡಿಕೊಂಡಂತಾಗುತ್ತದೆ ದೊಡ್ಡ ದೊಡ್ಡ ಸಂಶೋಧನೆಗಳು ಹುಟ್ಟಿಕೊಂಡಿದ್ದೇ ಪ್ರಶ್ನೆಗಳಿಂದ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು, ಪರೀಕ್ಷೆ ಎಂಬ ಭಯ, ಒತ್ತಡದಿಂದ ಮೊದಲು ಹೊರ ಬನ್ನಿ. ಇಲ್ಲವಾದಲ್ಲಿ ನೀವು ಕಲಿತ ಎಲ್ಲ ಪಾಠಗಳು ಮರೆತು ಬಿಡಬಹುದು ಎಂತಹ ಕಠಿಣ ಸಂದರ್ಭದಲ್ಲಿಯೂ ನೀವು ಕೀಳರಿಮೆ ಇಟ್ಟುಕೊಳ್ಳಬಾರದು. ಪೋಷಕರು ಕೂಡ ಮಕ್ಕಳ ಮೇಲೆ ನಂಬಿಕೆ ಇಡಬೇಕು ಎಂದು ನವೀನ್ ಕುಮಾರ್ ತಿಳಿಹೇಳಿದರು.
ಸಂದರ್ಭದಲ್ಲಿ ,ಗುರುರಾಜ್ ಶೆಟ್ಟಿ,ಪ್ರಮೋದ್ ಗೌಡ ,ವಿಕ್ರಂ ಅಯ್ಯಂಗಾರ್,ನವೀನ್, ರವಿಚಂದ್ರ,ಪ್ರಶಾಂತ್, ಸಂತೋಷ್,
ಮಂಜುನಾಥ್,ಶ್ರೀನಿವಾಸ್ ಶೆಟ್ಟಿ ,ಹೇಮಂತ್ ಮತ್ತಿತರರು ಹಾಜರಿದ್ದರು.
