(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಸಾರಿಗೆ ಸಂಸ್ಥೆಯಲ್ಲಿ ಸಹಾಯಕ ಸಂಚಾರಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಬಸವರಾಜು ಅವರಿಗೆ ಕೆ ಎಸ್ ಆರ್ ಟಿ ಸಿ ಕೊಳ್ಳೇಗಾಲ ಘಟಕದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.
ಘಟಕ ವ್ಯವಸ್ಥಾಪಕರಾದ ಭೋಗನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತರಾದ ಬಸವರಾಜು ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಯುತವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಘಟಕ ವ್ಯವಸ್ಥಾಪಕ ಭೋಗನಾಯಕ ಅವರು, ಬಸವರಾಜು ಅವರು ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ನಿರಂತರವಾಗಿವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಚಾರ ಶಾಖೆಯ ಸಂಚಾರ ನಿರೀಕ್ಷಕ ಯತೀಶ್, ಟಿ ಸಿ ರಾಜಣ್ಣ, ಭದ್ರತಾ ಶಾಖೆಯ ವಿಕಾಸ್, ನಗದು ಶಾಖೆಯ ಮೇಲ್ವಿಚಾರಕ ಮಂಜುನಾಥ್, ಯಾಂತ್ರಿಕ ಸಿಬ್ಬಂದಿಗಳ ಮೇಲ್ವಿಚಾರಕರಾದ ಉಮೇಶ್, ನೌಕರರ ಪರವಾಗಿ ನಾರಾಯಣ, ನಂಜುಂಡಸ್ವಾಮಿ, ಶಿವಪ್ರಸಾದ್, ಸ್ಟ್ಯಾಂಡ್ ಇಂಚಾರ್ಜ್ ಚರಣ್ ಹಾಗು ಘಟಕದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಿ ರಂಗಸ್ವಾಮಿ ಯವರು ಕಾರ್ಯಕ್ರಮ ನಿರೂಪಿಸಿದರು.
