(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಎಸ್ಐ ಗಳಿಗೆ ಆಯಾ ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿಗಳು ಸನ್ಮಾನಿಸಿ, ಬೀಳ್ಕೊಡುಗೆ ನೀಡಿದರು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಟಾದಿಕಾರಿ ಮುತ್ತುರಾಜು ಹಾಗೂ ಆಡಳಿತ ವರ್ಗ ಶ್ರೀ ವಿಶ್ವ, ಎ ಎಸ್ ಐ, ಚಾ. ನಗರ ಪಟ್ಟಣ ಠಾಣೆ ಹಾಗೂ ಶ್ರೀ ಕೆ. ಸಿ. ಶಿವಕುಮಾರ್. ಎ ಎಸ್ ಐ, ಕುದೇರು ಪೊಲೀಸ್ ಠಾಣೆ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಗೌರವಿಸಿ ಬೀಳ್ಕೊಟ್ಟರು.
ಹಾಗಿಯೆ ಚಾಮರಾಜನಗರ ವಿವಿಧ ಠಾಣೆಗಳಲ್ಲಿ ಕೆಲಸ ನಿರ್ವಹಿಸಿ ನಂತರ ಮೈಸೂರು ಜಿಲ್ಲಾ ವಿಬಾಗಕ್ಕೆ ವರ್ಗಾವಣೆಯಾದ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಶಿವಶಂಕರ್ ಅವರನ್ನ ಮಂಡ್ಯ ಎಸ್ಪಿ ಶೋಭ ರಾಣಿ ಹಾಗೂ ಆಡಳಿತ ವರ್ಗ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.

