ಕ್ಯಾರಕಾಸ್: ಗುರುವಾರ ವೆನೆಜುವೆಲಾದಲ್ಲಿ ಸಂಭವಿಸಿದ 2 ಪ್ರಬಲ ಭೂಕಂಪಗಳು ಇಡೀ ದೇಶವನ್ನೇ ಸರ್ವನಾಶ ಮಾಡಿಬಿಟ್ಟಿದೆ.
ವೆನೆಜುವೆಲಾದ ಉತ್ತರ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ, ಅದಕ್ಕೂ ಮುಂಚೆ ಕೇವಲ 40 ಸೆಕೆಂಡುಗಳಲ್ಲಿ 7.2 ತೀವ್ರತೆಯ ಮತ್ತೊಂದು ಭೂಕಂಪನ ಆಗಿದೆ.
ಕೇವಲ 40 ಸೆಕೆಂಡುಗಳ ಅಂತರದಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದ್ದು ಸಾವು ನೋವುಗಳಿಗೆ ಕಾರಣವಾಗಿದೆ.ಸಾವಿರಾರು ಮಂದಿ ಮೃತಪಟ್ಟಿದ್ದಾರೆ.ಬಹಳಷ್ಟು ಜನ ಉರುಳಿದ ಕಟ್ಡಡಗಳ ಅವಶೇಷಗಳಡಿ ಸಿಲುಕಿದ್ದು,ರಕ್ಷಣಾ ಕಾರ್ಯ ಮುಂದುವರಿದಿದೆ.
ಅದರಲ್ಲೂ ರಾಜಧಾನಿ ಕ್ಯಾರಕಾಸ್ನಲ್ಲಿ ಹಲವು ಕಟ್ಟಡಗಳು ಜನರ ಕಣ್ಣ ಮುಂದೆಯೇ ಧರೆಗುರುಳಿವೆ.
ಬಹಳಷ್ಟು ಕಟ್ಟಡಗಳು ಕುಸಿದಿವೆ ಭೂಮಿ ಕಂಪಿಸುತ್ತಿದ್ದಂತೆ ಜನರು ತಮ್ಮ ಕುಟುಂಬದವರೊಂದಿಗೆ ಮನೆಗಳು ಮತ್ತು ಕಚೇರಿಗಳಿಂದ ಭಯದಿಂದ ಹೊರಗೆ ಓಡಿ ಬಂದಿದ್ದಾರೆ
ವೆನೆಜುವೆಲಾದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಯುದ್ದದೋಪಾದಿಯಲ್ಲಿ ಸಾಗಿದೆ.
ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನೆರವು ನೀಡುತ್ತಿವೆ. ಜನರು ತುಂಬಾ ಆತಂಕದಲ್ಲಿದ್ದಾರೆ.
ಎರಡು ಪ್ರಬಲ ಭೂಕಂಪಗಳ ನಂತರ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
