ಮೈಸೂರು: ನಾಗರಹೊಳೆ ಉದ್ಯಾನದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರು ಅರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ಹನಗೋಡು ಹೋಬಳಿಯ ಶಿಂಡೇನಹಳ್ಳಿ ರವಿಕುಮಾರ್ ಆಲಿಯಾಸ್ ಅಮಾಸೆ ರವಿ ಹಾಗೂ ಬಿ.ಆರ್.ಕಾವಲ್ನ ರಾಜು ಆಲಿಯಾಸ್ ಗುಂಡ ಬಂಧಿತ ಆರೋಪಿಗಳು.
ಈ ವೇಳೆ ಅರಣ್ಯಾಧಿಕಾರಿಗಳು ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ವೀರನಹೊಸಳ್ಳಿ ವಲಯದಲ್ಲಿ ನಡೆದಿದೆ.
ಶಿಂಡೇನಹಳ್ಳಿಯ ಸುನಿಲ್, ಮುದಗನೂರಿನ ಎಂ.ಬಿ.ಗಣೇಶ ಪರಾರಿಯಾದ ಆರೋಪಿಗಳು.
ಹೆಣ್ಣು ಜಿಂಕೆಯ ಶವ, ಬೇಟೆಗೆ ಬಳಸಿದ್ದ ಸಿಂಗಲ್ ಬ್ಯಾರಲ್ ಬಂದೂಕು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮಚ್ಚು, 5 ಜೀವಂತ ಕಾಡತೂಸುಗಳು, ಬಳಕೆ ಮಾಡಿದ್ದ 1 ಕಾಡುತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
