ಕುಂದಾಪುರ: ಕುಂದಾಪುರದ ಹಿರಿಯ ನ್ಯಾಯವಾದಿಗಳಾದ ರವಿಕಿರಣ್ ಮುರುಡೇಶ್ವರ ಅವರಿಗೆ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ರವಿಕಿರಣ್ ಅವರ ನ್ಯಾಯಾಂಗ ಕ್ಷೇತ್ರದಲ್ಲಿನ ಶ್ರಮ ಹಾಗೂ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ವತಿಯಿಂದ ಅವರ ಕಾರ್ಯಾಲಯದಲ್ಲೇ ಗೌರವಿಸಲಾಯಿತು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ಅವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಡಾ ಭಾರತಿ ಮರವಂತೆ, ಸದಾನಂದ ಎಂ ಮತ್ತಿತರರು ಹಾಜರಿದ್ದರು.
