ತುಮಕೂರು: ತುಮಕೂರು ತಾಲೂಕಿನ ಹೊನ್ನುಡಿಕೆ ಬಳಿ ಓಮಿನಿ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬಿಎಸ್ ಪಾಳ್ಯ ಗ್ರಾಮದ ತಾಯಿ ಕಮರ್ ಉನ್ನಿಸ (51) ಹಾಗೂ ಆಕೆಯ ಪುತ್ರ ಸೈಯದ್ ತಬ್ರೆಷ್ ಪಾಷಾ (27) ಮೃತಪಟ್ಟ ದುರ್ದೈವಿಗಳು.
ಹೊನ್ನುಡಿಕೆ ಬಳಿಯ ಓಳಕಲ್ಲು ಹಾಗೂ
ಬಿಎಸ್ ಪಾಳ್ಯ ರಸ್ತೆಯಲ್ಲಿ ಅಪಘಾತ ನಡೆದಿದ್ದು,ತಮ್ಮ ಜಮೀನಿನ ಪೋತಿ ಖಾತೆ ಮಾಡಿಸಲು ಓಳಕಲ್ಲು ಗ್ರಾಮ ಪಂಚಾಯತಿ ಕಚೇರಿಗೆ ಬೈಕ್ ನಲ್ಲಿ ಅಮ್ಮ ಮಗ ಹೋಗುತ್ತಿದ್ದರು.
ಈ ವೇಳೆ ಎದುರಿನಿಂದ ಬಂದ ಓಮಿನಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ.
