ಬೆಂಗಳೂರು: ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ಪೇಮೆಂಟ್ ಕೋಟಾ ವಿಸ್ತರಣೆ ಎಂದು ನಾನು ಮಾಡಿದ್ದ ಆರೋಪ ಈಗ ಅಕ್ಷರಶಃ ಸತ್ಯ ಎಂಬುದು ಸಾಬೀತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ ವೈರಲ್ ಆಡಿಯೋ ಸಂಭಾಷಣೆ ಈ ಭ್ರಷ್ಟಾಚಾರಕ್ಕೆ ಜೀವಂತ ಸಾಕ್ಷಿ ಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ
ಆ ಧ್ವನಿ ನನ್ನದಲ್ಲ, ಆಡಿಯೋದಲ್ಲಿ ಮಾತಾಡಿರೋದು ನಾನಲ್ಲ ಎಂಬ ಎಂದಿನ ಸವಕಲು ಸಮಜಾಯಿಷಿಗಳನ್ನು ಕೇಳಿ ಕೇಳಿ ಕನ್ನಡಿಗರು ರೋಸಿ ಹೋಗಿದ್ದಾರೆ. ಈ ಕೂಡಲೇ ಈ ಆಡಿಯೋವನ್ನು ವೈಜ್ಞಾನಿಕ ಫೋರೆನ್ಸಿಕ್ ತನಿಖೆಗೆ ಒಳಪಡಿಸಿ, ಸತ್ಯಾಸತ್ಯತೆಯನ್ನು ನಾಡಿನ ಜನರ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.
ಆಡಿಯೋದಲ್ಲಿರುವುದು ತಿಮ್ಮಾಪುರ ಅವರ ಧ್ವನಿಯೇ ಅಲ್ಲ ಎನ್ನುವುದಾದರೆ, ಪ್ರಕರಣವನ್ನು ಫೋರೆನ್ಸಿಕ್ ತನಿಖೆಗೆ ಒಪ್ಪಿಸಲು ಭಯವೇಕೆ ಮುಖ್ಯಮಂತ್ರಿಗಳೆ, ಗೃಹ ಸಚಿವರೆ ಎಂದು ಅಶೋಕ್ ಅವರು ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ಅವರ ಕಾಲೆಳೆದಿದ್ದಾರೆ.
