ಮೈಸೂರು: ಹುಸಿಬಾಂಬ್ ಸಂದೇಶಗಳನ್ನ ಕಳಿಸಿ ಆತಂಕ ಸೃಷ್ಟಿಸುತ್ತಿದ್ದ ಕತರ್ನಾಕ್ ವ್ಯಕ್ತಿಯನ್ನ ಈಗ ದೆಹಲಿ ಪೊಲೀಸರು ಬಂಧಿಸಿದ್ದಾರೆ.ಅದೂ ಆತನ ಬಂಧನವಾಗಿರುವುದು ಸಾಂಸ್ಕೃತಿಕ ನಗರಿಯಲ್ಲಿ !
ಮೈಸೂರಿನಲ್ಲಿ ಅಜ್ಞತ ಸ್ಥಳದಲ್ಲಿದ್ದುಕೊಂಡು ಬಾಂಬ್ ಸ್ಪೋಟಿಸುವ ಬೆದರಿಕೆ ಸಂದೇಶಗಳನ್ನ ಕಳಿಸುತ್ತಿದ್ದ ವ್ಯಕ್ತಿಯನ್ನ ದೆಹಲಿ ಪೊಲೀಸರು ಬಂಧಿಸಿರೋದು ವಿಶೇಷ. ಜತೆಗೆ ಆತಂಕ ಕೂಡಾ ಉಂಟಾಗಿದೆ.
ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತ 6 ನೇ ಕ್ರಾಸ್ ನ ಮನೆಯೊಂದರಲ್ಲಿದ್ದುಕೊಂಡು ಈ ಕತರ್ನಾಕ್ ಕಾರ್ಯಾಚರಣೆ ನಡೆಸುತ್ತಿದ್ದ.
ಶ್ರೀನಿವಾಸ್ ಎಂಬಾತನನ್ನು ಬಂಧಿಸಿ ದೆಹಲಿಗೆ ಕರೆದೊಯ್ಯಲಾಗಿದೆ.
ಇತ್ತೀಚೆಗೆ ಸರ್ಕಾರಿ ಕಚೇರಿಗಳು,ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಪೋಟದ ಬೆದರಿಕೆ ಕರೆಗಳು ಬರುತ್ತಲೇ ಇದ್ದು ಆತಂಕ ಸೃಷ್ಟಿಯಾಗಿತ್ತು.
ಒಂದೇ ತಿಂಗಳಿನಲ್ಲಿ ಹಲವು ಬಾರಿ ಮೇಲ್ ಮೂಲಕ ಸಂದೇಶ ರವಾನೆ ಆಗಿತ್ತು.ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಿಡಿಗೇಡಿಯನ್ನ ಬಂಧಿಸಲು ಕಾರ್ಯಾಚರಣೆಗೆ ಮುಂದಾಗಿದೆ.
ಈ ಆರೋಪಿಯು ಮೈಸೂರಿನಿಂದ ಕಾರ್ಯಾಚರಣೆ ಮಾಡುತ್ತಿದ್ದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ದೆಹಲಿ ಪೊಲೀಸರ ತಂಡ ಧಿಢೀರ್ ದಾಳಿ ನಡೆಸಿ ಆರೋಪಿ ಶ್ರೀನಿವಾಸ ನನ್ನು ಬಂಧಿಸಿದ್ದು,ದೆಹಲಿ ಪೊಲೀಸರಿಗೆ ವಿವಿ ಪುರಂ ಠಾಣೆ ಪೊಲೀಸರು ನೆರವು ನೀಡಿದ್ದಾರೆ.
ಆರೋಪಿ ಮನೆಯಲ್ಲಿ ಹಲವು ಸಿಮ್ ಗಳು ಹಾಗೂ ಲ್ಯಾಪ್ ಟ್ಯಾಪ್ ಗಳು ಪೊಲೀಸರಿಗೆ ಸಿಕ್ಕಿದೆ.
