ಮೈಸೂರು: ಮೈಸೂರು ಗೋಭಕ್ತ ಸಂಘಟನೆ ಟ್ರಸ್ಟ್ ವತಿಯಿಂದ ಸಮಾಜಸೇವಕರೂ, ಗೋಭಕ್ತರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರೂ ಆಗಿದ್ದ ದಿವಂಗತ ಮಹೇಂದ್ರ ಚೋಯಲ್ ಅವರ ಪ್ರಥಮ ಪುಣ್ಯಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ನ್ಯೂ ಸಯ್ಯಾಜಿರಾವ್ ರಸ್ತೆ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಮಹೇಂದ್ರ ಚೋಯಲ್ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಶಿಬಿರದಲ್ಲಿ 80ಕ್ಕೂ ಹೆಚ್ಚು ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಲಾದ ರಕ್ತವನ್ನು ಅಗತ್ಯವಿರುವ ರೋಗಿಗಳ ಚಿಕಿತ್ಸೆಗೆ ಬಳಸುವ ಉದ್ದೇಶದಿಂದ ಜೀವಧಾರ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಚೋಯಲ್ ಕುಟುಂಬದವರು ಎಲ್ಲಾ ರಕ್ತದಾನಿಗಳಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು. ಮಾಜಿ ಶಾಸಕ ಎಲ್. ನಾಗೇಂದ್ರ ಅವರು ರಕ್ತದಾನಿಗಳನ್ನು ಪ್ರೋತ್ಸಾಹಿಸಿ, ಅವರ ಸೇವೆಯನ್ನು ಶ್ಲಾಘಿಸಿದರು.
ಸಮಾಜ ಸೇವಕ ಡಾ. ಮಹೇಂದ್ರ ಸಿಂಗ್ ರಾಜಪುರೋಹಿತ್ ಕಾಲಪ್ಪಾ
ಮಾತನಾಡಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಪುಣ್ಯದ ಕಾರ್ಯ.ಇದರಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ರಕ್ತದಾನದಿಂದ ಯಾವುದೇ ಜೀವಕ್ಕೆ ಅಪಾಯವಿಲ್ಲ ಎಂಬ ಅರಿವನ್ನು ಸಮಾಜದಲ್ಲಿ ಮೂಡಿಸುವುದರ ಜೊತೆಗೆ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅನ್ನಾರಾಮ್ ಚೌಯಲ್, ಸುಶೀಲಾ ದೇವಿ, ಓಂಪ್ರಕಾಶ್, ರೇಖಾ ಓಂಪ್ರಕಾಶ್, ಚೇನಾರಾಮ್, ಜೀವನ್, ಅಂಜು, ಲಕ್ಷ್ಮೀ, ಬಸಂತೀ, ಪಿಂಕಿ, ಭಾವೇಶ್, ಆಯುಷ್ ಶ್ರೇಯಸ್, ಸೀಮಾ, ವಿಹಾನ್, ಪುನಾ ಸೇ ಆಯೇ ಪ್ರಕಾಶ್, ದಿನೇಶ್, ರಾಜು, ದಿನೇಶ್ ಲಕ್ಷ್ಮಣ್, ಸಮಾಜ ಸೇವಕ ಡಾ. ಮಹೇಂದ್ರ ಸಿಂಗ್ ರಾಜಪುರೋಹಿತ್ ಕಾಲಪ್ಪಾ, ದೇವೇಂದ್ರ ಪರಿಹಾರಿಯಾ, ಕರಮಾರಾಮ್ ಸೀರವಿ, ಪೃಥ್ವಿ ಸಿಂಗ್ ಮತ್ತಿತರರು ಹಾಜರಿದ್ದರು.
