ಎಚ್.ಡಿ.ಕೋಟೆ: ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸವಾರ ಮೃತಪಟ್ಡ ಘಟನೆ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಹೆರಿಗೆ ಗ್ರಾಮದ ಹಿರಿಯ ಮುಖಂಡ ವರಸಿಂಗೇಗೌಡ (70) ಸಾವಿಗೀಡಾದ ದುರ್ದೈವಿ.
ವರಸಿಂಗೇಗೌಡ ಹೈರಿಗೆಯ ಮನೆಯಿಂದ ಬೈಕ್ ನಲ್ಲಿ ಮಾದಾಪುರ ಗ್ರಾಮಕ್ಕೆ ಹೋಗುತ್ತಿದ್ದಾಗ ಹೈರಿಗೆ ಗ್ರಾಮದ ನಿವಾಸಿಗಳಾದ ವೇಣು ದಂಪತಿ ತಮ್ಮ ಬೈಕಿನಲ್ಲಿ ಮಾದಾಪುರದಿಂದ ಹೈರಿಗೆ ಗ್ರಾಮಕ್ಕೆ ಬರುತ್ತಿದ್ದರು.
ಈವೇಳೆ ಪೆಟ್ರೋಲ್ ಬಂಕ್ ಬಳಿ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿವೆ.
ಘಟನೆಯಲ್ಲಿ ವರಸಿಂಗೇಗೌಡರ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದ್ದು, ಅವರನ್ನು ಕೂಡಲೇ ಗ್ರಾಮಸ್ಥರು, ಸಂಬಂಧಿಕರು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ ಜವರಮ್ಮ, ಪುತ್ರರಾದ ಶ್ರೀಧರ್, ಅನಿಲ್, ಪುತ್ರಿ ಅನುಪಮಾ ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಗ್ರಾಮದ ತೋಟದಲ್ಲಿ ನೆರವೇರಿತು.
ಪ್ರಕರಣಕ್ಕೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
