ತಾಂಡವಪುರ: ಮೈಸೂರು ತಾಲೂಕಿನ ವರಕೋಡು ಬೀರೇಶ್ವರಸ್ವಾಮಿ ದೇವಾಲಯದ ಬಸವ ವಯೋಸಹಜ ಸಮಸ್ಯೆಯಿಂದ ವಿಧಿವಶವಾಗಿದೆ
ಮೈಸೂರು ತಾಲೂಕಿನ ವರಕೋಡು, ಮೂಡಲಹುಂಡಿ, ಬಡಗಲಹುಂಡಿ, ಕೆಂಪೇಗೌಡನಹುಂಡಿ, ಹೊಸಹುಂಡಿಗೆ ಸೇರಿದ ಗಡಿಗ್ರಾಮದ ಬೀರೇಶ್ವರ, ಬನ್ನಿಮಹಾಕಾಳೇಶ್ವರಿ ದೇಗುಲದ ಬಸವನಾಗಿ ಕಳೆದ ೨೦ ವರ್ಷದಿಂದ ವಿವಿಧ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದ ಬಸವ ಕಳೆದ ಒಂದು ತಿಂಗಳಿಂದ ವಯೋ ಸಹಜ ಸಮಸ್ಯೆಯಿಂದ ಬಳಲುತಿತ್ತು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ನಾಗರಾಜ್ ನೇತೃತ್ವದ ಪಶುವೈದ್ಯರ ತಂಡ ಚಿಕಿತ್ಸೆ ನೀಡಿ ಚಿಕಿತ್ಸೆ ಕೊಟ್ಟಿದ್ದರು.
ಸ್ವಲ್ಪ ಚೇತರಿಸಿಕೊಂಡಿದ್ದ ಬಸವ ಸೋಮವಾರ ಸಂಜೆ ಅಸುನೀಗಿದೆ.
ಐದು ಗ್ರಾಮಗಳಲ್ಲೂ ಬಸವನ ಪಾರ್ಥಿವ ಶರೀರವನ್ನು ಮೆರವಣಿಗೆ ನಡೆಸಿ, ಪೂಜೆ ಸಲ್ಲಿಸಿ,ನಂತರ ವರಕೋಡು ಬೀರೇಶ್ವರಸ್ವಾಮಿ ದೇವಾಲಯದ ಮುಂಭಾಗದ ಆವರಣದಲ್ಲಿ ವಿಧಿ ವಿಧಾನದಂತೆ ಅಂತಿಮಕ್ರಿಯೆ ನೆರವೇರಿಸಲಾಯಿತು.
