ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕು, ಬೇಗೂರು ಹೋಬಳಿ ಮರಳಾಪುರ ಗ್ರಾಮದಲ್ಲಿ ಬಸವ ಬಳಗ ಹಾಗೂ ಗ್ರಾಮಸ್ಥರು ಸೇರಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದರು.
ಭಾನುವಾರ ಬೆಳಿಗ್ಗೆ ಬಸವಣ್ಣ ಅವರ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಮತ್ತು ಮದ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು.
ಸೋಮಹಳ್ಳಿ ಮಠದ ನಿಯೋಜಿತ ಶ್ರೀಗಳಾದ ಬಸವಯೋಗಿಪ್ರಭು ಸ್ವಾಮೀಜಿಯವರು ಬಸವಣ್ಣನವರ ಮೂರ್ತಿಗೆ ಪುಷ್ಪರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು .
ನಂತರ ಬಸವಣ್ಣನವರ ಪ್ರತಿಮೆಯನ್ನು ಭವ್ಯವಾಗಿ ಅಲಂಕರಿಸಿ ಪ್ರಮುಖ ಬಿದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಯುವಕರು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಮೆರವಣಿಗೆ ನಡೆಯಿತು.
ಮುಖಂಡರು ಗಳಾದ ಶ್ರೀಕಂಠಪ್ಪ, ಚಂದ್ರಪ್ಪ, ಮಾದೇವಪ್ಪ, ಬಸವ ಬಳಗ ಯುವಕರು ಗ್ರಾಮಸ್ಥರ ನೇತೃತ್ವದಲ್ಲಿ ಬಸವ ಜಯಂತಿ ನೆರವೇರಿತು.
