
ಬನ್ನೂರು: ಬನ್ನೂರು ತಾಲೂಕಿನ ನೇರಲ್ಕೆರೆ ಬನ್ನೂರು ಗಡಿಭಾಗ ಮರಯ್ಯನ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು
ಸಂಘದ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು.
ಕೆರೆಗಳಿಗೆ ನೀರು ತುಂಬಿಸದ ಜಿಲ್ಲಾ ಆಡಳಿತ, ನೀರಾವರಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೋಗೀ ಕೂಡಲೇ ನೀರು ತುಂಬಿಸುವಂತೆ ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಿಳಾ ಅಧಿಕಾರಿಯನ್ನು ಬನ್ನೂರು ನಾರಾಯಣ ಅವರ ನೇತೃತ್ವದಲ್ಲಿ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಮರಯ್ಯನ ಕೆರೆ ನೀರಿಲ್ಲದೆ ಬಣಗುಡುತ್ತಿದೆ.ಕುರಿ,ಮೇಕೆಗಳಿಗೇ ನೀರು ಇಲ್ಲ,ಇನ್ನು ಬೆಳೆ ಬೆಳೆಯುವುದು ದೂರದ ಮಾತು.ಇಲ್ಲಿನ ಪರಿಸ್ಥಿತಿಯನ್ನು ಮೊದಲು ನಿಮ್ಮ ಹಿರಿಯ ಅಧಿಕಾರಿಗಳ ಮೂಲಕ,ಶಾಸಕರು,ಸಿಎಂ ಮತ್ತು ಸರ್ಕಾರಕ್ಕೆ
ತಿಳಿಸಿ ಎಂದು ಒತ್ತಾಯಿಸಿದರು.
ನೇರಲಕೆರೆ, ಮಾರಸನಹಳ್ಳಿ, ಕೊರಮೆಗಳ ಕೊಪ್ಪಲು, ಯಾಚನಹಳ್ಳಿ, ತುರುಗನರು ಮತ್ತಿತರೆಡೆ ಕೃಷಿ ಚಟುವಟಿಕೆಗೆ ನೀರಿಲ್ಲದೆ ತೊಂದರೆಯಾಗಿದೆ ಎಂದು ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.
ಈ ಕೆರೆಗೆ ನೀರು ತುಂಬಿಸಿದರೆ ಐಪಿ ಗಳಿಗೆ ಅಂತರ್ಜಲ ಜಾಸ್ತಿ ಆಗುತ್ತದೆ ಇದರಿಂದ ಕುಡಿಯುವ ನೀರು ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಕೃಷಿ ಚಟುವಟಿಕೆ ತುಂಬಾ ಅನುಕೂಲವಾಗುತ್ತದೆ ಹಾಗಾಗಿ ಮೊದಲು ಕೆರೆಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
