ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಟಿಸಂ (ಸ್ವಲೀನತೆ) ಕುರಿತು ಸಾರ್ವಜನಿಕರಲ್ಲಿ ವಾಕಥಾನ್ ಮೂಲಕ ಅರಿವು ಮೂಡಿಸಲಾಯಿತು
ಸಮಾಜದಲ್ಲಿ ಆಟಿಸಂ ಹೊಂದಿರುವ ವ್ಯಕ್ತಿಗಳ ಬಗ್ಗೆ ಗೌರವ, ಸ್ವೀಕಾರ ಮತ್ತು ಬೆಂಬಲದ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಈ ವಾಕಥಾನ್ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ,ಓವಲ್ ಮೈದಾನದಲ್ಲಿ ಸಮಾರೋಪಗೊಂಡಿತು.
ವಿವಿಧ ವಯೋಮಾನದ ನಾಗರಿಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡು ‘ಒಳಗೊಳ್ಳುವಿಕೆಯ ಸಮಾಜ’ ಎಂಬ ಸಂದೇಶವನ್ನು ಸಾರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶುಭಾ ಸಂಜಯ್ ಅರಸು, ಶ್ರೀ ಕಿಶೋರ್ ಬಿದ್ದಪ್ಪ ಹಾಗೂ ರೋಟೇರಿಯನ್ ಬೋಪಣ್ಣ ಅವರು, “ಆಟಿಸಂ ಒಂದು ರೋಗವಲ್ಲ, ಅದು ಪ್ರಪಂಚವನ್ನು ನೋಡುವ ವಿಭಿನ್ನ ದೃಷ್ಟಿಕೋನ ಎಂದು ಹೇಳಿದರು.
ಇಂತಹ ವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದು ಮತ್ತು ಅವರಿಗೆ ಪ್ರೀತಿ ಹಾಗೂ ಸಹಕಾರ ನೀಡುವುದು ಸಮಾಜದ ಜವಾಬ್ದಾರಿ ಎಂದು ತಿಳಿಸಿದರು.
ಸಮಾಜದಲ್ಲಿ ಅಜ್ಞಾನದಿಂದ ಉಂಟಾಗುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಈ ಜಾಗೃತಿ ಅಭಿಯಾನವನ್ನು ಪಾದ ಟ್ರಸ್ಟಿ ಸಂಗೀತಾ, ಬಲ್ಲಚಂಡ ಧನ್ಯ ಉತ್ತಪ್ಪ ಮತ್ತು ಕೋಟೇರ ದಿಲೀಪ್ ದೇವಯ್ಯ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಪ್ರಾಜೆಕ್ಟ್ ರೀಚ್ ಔಟ್’ ತಂಡದ ಸ್ವಯಂಸೇವಕರು ಶಿಸ್ತುಬದ್ಧ ವ್ಯವಸ್ಥೆ ಮಾಡಿ ಕಾರ್ಯಕ್ರಮದ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು.
