ಪಿರಿಯಾಪಟ್ಟಣ: ಇನ್ನು ಮುಂದೆ ಎಲ್ಲಾ ಗ್ರಾಮಗಳಲ್ಲೂ ಸರ್ವಜ್ಞ ಜಯಂತಿಯನ್ನು ಆಚರಿಸುವಂತಾಗಬೇಕು ಎಂದು ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ತಿಳಿಸಿದರು.
ಪಿರಿಯಾಪಟ್ಟಣದ ಮಾಕೋಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ 506ನೆ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಈ ಗ್ರಾಮದಲ್ಲಿ ಎಲ್ಲರೂ ಸೇರಿ ಸರ್ವಜ್ಞನ ಜಯಂತಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಸರ್ಕಾರದಿಂದಲೇ ಎಲ್ಲಾ ಕಡೆ ಸರ್ವಜ್ಞನ ಜಯಂತಿಯನ್ನು ಆಚರಿಸುವ ಬಗ್ಗೆ ಮನವಿ ಮಾಡಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್,ಜಿಲ್ಲಾ ಸದಸ್ಯ ವಿಷ್ಣುವರ್ಧನ್, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಪಿರಿಯಾಪಟ್ಟಣ ತಾಲೂಕು ಸಂಘಟನಾ ಕಾರ್ಯದರ್ಶಿ ಕೊಣಸೂರು ಶಿವರಾಜು, ಹುಣಸೂರು ತಾಲೂಕು ಅಧ್ಯಕ್ಷ ಸಣ್ಣ ಶಟ್ಟಿ, ಪಿರಿಯಾಪಟ್ಟಣ ತಾಲೂಕಿನ ಖಜಾಂಚಿಗಳಾದ ಸ್ವಾಮಿ ಶಟ್ಟಿ, ಪ್ರಭು, ದೇವಶಟ್ಟಿ, ಮಾಕೋಡ್ ಬಸವರಾಜು, ಮಂಜುನಾಥ್, ಕೃಷ್ಣಮೂರ್ತಿ, ಮಾಕೋಡ್ ಮಾದೇವ, ಉಪಾಧ್ಯಕ್ಷರಾದ ರಾಮಚಂದ್ರ, ತಿರುಮಲಪುರ ರಮೇಶ್, ಮಾದೇವಶೆಟ್ಟಿ ಹಾಗೂ ಮಾಕೋಡು ಗ್ರಾಮಸ್ಥರು ಪಾಲ್ಗೊಂಡಿದ್ದರು.
