ಅಜ್ಜಂಪುರ: ಮೌಖಿಕ ಪರಂಪರೆಯ ಗೀತೆಗಳಲ್ಲಿ ಹೆಚ್ಚು ಹೆಣ್ಣು ಮಕ್ಕಳಿಗೆ ನೀತಿ ಬೋಧನೆ ಹೇಳಿದೆ ಹೊರತು ಗಂಡಸರಿಗೆ ಎಲ್ಲೂ ಹೇಳಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಅಜ್ಜಂಪುರದ ಗೊಂಡೇದಲ್ಲಿ ಸಾಮೂಹಿಕ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಅಜ್ಜಂಪುರ ತಾಲೂಕು ಗೊಂಡೇದಲ್ಲಿ ಗ್ರಾಮ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು,ಇದರಿಂದ ಜನಪದ ಮಹಿಳಾ ಪ್ರಧಾನವಾದದ್ದು ಎಂಬುದು ಸಾಬೀತಾಗುತ್ತದೆ ಎಂದು ತಿಳಿಸಿದರು.
ಇಂದಿಗೂ ಜಾನಪದ ಜೀವಂತವಾಗಿರಲು ಮಹಿಳೆಯರೇ ಮುಖ್ಯ ಕಾರಣ, ಸಾಂಪ್ರದಾಯಿಕ ಆಚರಣೆಗಳನ್ನು ಹೆಣ್ಣು ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿರುವುದರಿಂದಲೇ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳು ಮುಂದಿನ ಪೀಳಿಗೆಗೆ ಆಧಾರವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಮ್ಮ ಮಾತನಾಡಿ ಜಿಲ್ಲಾ ಘಟಕದಿಂದ ಹತ್ತು ಗ್ರಾಮಗಳನ್ನು ಜಾನಪದ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು, ಗೊಂಡೇದಲ್ಲಿಯಲ್ಲಿ ಸಹ ಗ್ರಾಮ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಗೊಂಡೇದಲ್ಲಿ ಗ್ರಾಮದ ಮುಖಂಡರು ಗಿರೀಶ ಜಿ ಹಾಲಪ್ಪ ಮಾತನಾಡಿ ಗ್ರಾಮದಲ್ಲಿ ಮಹಿಳಾ ಕನ್ನಡ ಜಾನಪದ ಪರಿಷತ್ ಸ್ಥಾಪನೆ ಆಗಿರುವುದು ಬಹಳ ಸಂತೋಷ, ಗ್ರಾಮದಲ್ಲಿ ಮಹಿಳಾ ಸಬಲೀಕರಣಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
ಜಿಲ್ಲಾ ಕಜಾಪ ಸಂಘಟನೆ ಕಾರ್ಯದರ್ಶಿ ವಿಜಯ ಕುಮಾರಿ ಮಾತನಾಡಿ ಅಜ್ಜಂಪುರ ತಾಲೂಕಿನಲ್ಲಿ ಪ್ರತಿ ಗ್ರಾಮದಲ್ಲಿ ಮಹಿಳಾ ಘಟಕವನ್ನು ಸ್ಥಾಪಿಸಲಾಗುವುದು ಹಾಗೂ ತರಬೇತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷರು ಸವಿತಾ ಸತ್ಯನಾರಾಯಣ್ ಮಾತನಾಡಿದರು.
ಕನ್ನಡ ಜಾನಪದ ಪರಿಷತ್ ಗೊಂಡೇದಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ ಗಂಗಮ್ಮ, ಭಾಗ್ಯ, ಸುನಿತಾ, ನಳಿನಿ, ನಂದಿನಿ, ಗಿರಿಜಾ, ಜಯಮ್ಮ, ವೀಣಾ, ಆಶಾ ಹಾಗೂ ಜಯಮ್ಮ ಅವರುಗಳು ಪ್ರತಿಜ್ಞಾವಿಧಿಯೊಂದಿಗೆ ಪದಪತ್ರ ಸ್ವೀಕರಿಸಿದರು.
ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷರು ಕೆ ಸಿ ಕಾಂತಪ್ಪ,
ಗೊ ರು ಚ ಟ್ರಸ್ಟ್, ಗೌರವ ಕಾರ್ಯದರ್ಶಿ ಮೋಹನ್ ಕುಮಾರ್, ಕನ್ನಡ ಜಾನಪದ ಪರಿಷತ್ ತರೀಕೆರೆ ತಾಲೂಕು ಅಧ್ಯಕ್ಷರಾದ ಲೀಲಾ ಸೋಮಶೇಖರ್, ಕಡೂರು ಅಧ್ಯಕ್ಷೆ ಶೋಭಾ ಶ್ರೀನಿವಾಸ್, ಬಸವಪುರ ಮುಖ್ಯ ಶಿಕ್ಷಕರು ಮೋಹನ್ ಕುಮಾರ್, ರುದ್ರಪ್ಪ, ನಾಗರಾಜ್, ಜೈ ಕುಮಾರ್, ಹಾಲಸ್ವಾಮಿ, ಶಿವಲಿ ಹೋಬ್ಳಿ ಘಟಕ ಅಧ್ಯಕ್ಷರು ಮಧು ನಿಂಗಪ್ಪ ಮತ್ತುತರರು ಉಪಸ್ಥಿತರಿದ್ದರು.
