ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಉತ್ತನಹಳ್ಳಿ ರಸ್ತೆ ಮಾರ್ಗದಲ್ಲಿ ಜೋರು ಮಳೆಯಿಂದಾಗಿ ಬಂಡೆಯೊಂದು ಕುಸಿದು ರಸ್ತೆ ಮಧ್ಯೆ ಬಂದು ಬಿದ್ದಿದ್ದು ಅಪಾಯದ ಮುನ್ಸೂಚನೆ ನೀಡಿದೆ.
ಈ ಹಿಂದೆ ಚಾಮುಂಡಿಬೆಟ್ಟದಲ್ಲಿ ಕುಸಿತ ಕಂಡು ಬಂದಿತ್ತು, ನಂದಿ ಮಾರ್ಗದಲ್ಲಿ ಕುಸಿತ ಕಂಡು ನಾಲ್ಕೈದು ವರ್ಷಗಳ ಕಾಲ ಬಂದ್ ಆಗಿತ್ತು.ಈಗ ಮತ್ತೆ ಬಂಡೆ ಕುಸಿದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಆಗಾಗ್ಗೆ ಚಾಮುಂಡಿಬೆಟ್ಟದಲ್ಲಿ ಗುಡ್ಡ, ಬಂಡೆ ಕುಸಿಯುತ್ತಿದ್ದು, ಹೆಚ್ಚಿನ ದಟ್ಟಣೆಯಿಂದ ಅಪಾಯ ಎದುರಾಗುತ್ತಿರಬಹುದೆ ಅಥವಾ ಬೆಟ್ಟದಲ್ಲಿ ಹೆಚ್ಚುತ್ತಿರುವ ಕಟ್ಟಡ ಕಾಮಗಾರಿಗಳಿಂದಾನಾ ಎಂಬ ಬಗ್ಗೆ ಭಕ್ತರು ಆತಂಕದಿಂದ ಚರ್ಚೆ ಮಾಡುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತುಕೊಳ್ಳುವ ಅತ್ಯಗತ್ಯವಿದೆ.
