ಮೈಸೂರು: ದಸರಾ ಮಹೋತ್ಸವ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ಕಾಳರಾತ್ರಿ ಅಮ್ಮನ ಅಲಂಕಾರ ಮಾಡಿ ವಿಶೇಷ ಪೂಜೆ ಮಹಾಮಂಗಳಾರತಿ ನೆರವೇರಿಸಲಾಯಿತು.
ತಾಯಿ ಪಾರ್ವತಿ ಕಡುನೀಲಿ,ಕಪ್ಪು ಬಣ್ಣದಲ್ಲಿ ರುಂಡ ಮಾಲಾಧಾರಿಯಾಗಿ ಕೈನಲ್ಲಿ ತ್ರಿಶೂಲ ಹಿಡಿದು,ನಾಲಿಗೆ ಹೊರಚಾಚಿ,ಶಿರದಲ್ಲಿ ರುಂಡ ಧರಿಸಿ ರೌದ್ರಾವತಾರದಲ್ಲಿ ರುದ್ರರಮಣೀಯಳಾಗಿ ಭಕ್ತರಿಗೆ ಅಭಯ ನೀಡುತ್ತಿದ್ದಾಳೆ.
ದೇವಿ ಪಾರ್ವತಿ ಕಾಳರಾತ್ರ ಅಮ್ಮನ ಅಲಂಕಾರದಲ್ಲಿ ವಿಶೇಷವಾಗಿ ಅಲಂಕೃತಗೊಂಡು ಕಂಗಳಿಸುತ್ತಿದ್ದಾಳೆ.
ತಾಯಿ ಪಾರ್ವತಿ ದೇವಿಯನ್ನು ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನ್ ಅವರು ಕಾಳರಾತ್ರಿ ಅಮ್ಮನ ಅವತಾರದಲ್ಲಿ ಸಿಂಗರಿಸಿ,ಮಹಾಪೂಜೆ ನೆರವೇರಿಸಿದರು.
ವಿವಿಧ ಹೂಗಳಿಂದ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ಮಾಡಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ತಾಯಿಗೆ ನಮಸ್ಕರಿಸಿದರು.
