ಮೈಸೂರು: ಮೈಸೂರಿನ ಪ್ರತಿಷ್ಠಿತ ಯುವ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ್ ಅವರು ನಗರದ ಕಾಳಿದಾಸ ರಸ್ತೆಯಲ್ಲಿರುವ ಯತಿರಾಜ ಮಠದ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವರ ಪ್ರಸಾದ ಸ್ವೀಕರಿಸಿದ ಪ್ರಭುದೇವ್ ಅವರಿಗೆ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ಅವರು ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವೀರ ರಾಘವಾಚಾರ್, ಶಾಂತರಾಮ್ ,ಯೋಗ ನರಸಿಂಹ(ಮುರಳಿ), ವಿಕ್ರಂ ಅಯ್ಯಂಗಾರ್, ಟಿ.ಎಸ್. ಅರುಣ್, ಅಮಿತ್, ಎಂ. ವಿ ನಾಗೇಂದ್ರ ಬಾಬು ಮತ್ತಿತರರು ಹಾಜರಿದ್ದರು.
