ಮೈಸೂರು: ದಸರಾ ಮಹೋತ್ಸವ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ಬ್ರಹ್ಮಚಾರಿಣಿ ಅಲಂಕಾರ ಮಾಡಿ ವಿಶೇಷ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು.
ತಾಯಿ ಪಾರ್ವತಿಗೆ ಬಿಳಿಯ ಬಣ್ಣದ ಉಡುಗೆಯಲ್ಲಿ ಮನೋಹರವಾಗಿ ಕಾಣುತ್ತಿದ್ದಾಳೆ.
ವಿವಿಧ ಆಭರಣಗಳು, ಬೆಳ್ಳಿ ಕೈಗಳು ಕಿರೀಟ ತೊಡಿಸಿ ಕೈಯಲ್ಲಿ ತ್ರಿಶೂಲಧಾರಿಯಾಗಿ ಅಮ್ಮ ಮಂದಸ್ಮಿತೆಯಾಗಿ ಕಂಗಳಿಸುತ್ತಿದ್ದಾಳೆ.
ತಾಯಿ ಪಾರ್ವತಿ ದೇವಿಯನ್ನು ಬ್ರಹ್ಮಚಾರಿಣಿ ಅಲಂಕಾರದಲ್ಲಿ ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನವರು ಶ್ವೇತಬಣ್ಣದಲ್ಲಿ ಸಿದ್ದಪಡಿಸಿದ್ದಾರೆ.
ಬಳೆ ಮತ್ತು ವಿವಿಧ ಹೂಗಳಿಂದ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ತಾಯಿಯನ್ನು ಕಣ್ತುಂಬಿ ಕೊಂಡರು
