ಕೊಳ್ಳೇಗಾಲ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆ ಯಲ್ಲಿ ತೊಡಗಿರುವ ಹಾಗೂ ಕಾರ್ಮಿಕರಾಗಿ ದುಡಿಯುವ ಮಕ್ಕಳನ್ನು ಗುರುತಿಸಿ ಪುನರ್ವಸತಿ ಗೊಳಿಸಲು ಕಾರ್ಯಾಚರಣೆ ನಡೆಸಿ ಅರಿವು ಮೂಡಿಸಲಾಯಿತು.
ಮಕ್ಕಳ ರಕ್ಷಣಾ ಇಲಾಖೆ ಹಾಗೂ ವಿಷನ್ ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಬಸ್ ನಿಲ್ದಾಣ, ಅಂಗಡಿ ಬೀದಿಗಳಲ್ಲಿ ಭಿಕ್ಷಾಟನೆ ಯಲ್ಲಿ ತೊಡಗಿರುವ ಹಾಗೂ ಕಾರ್ಮಿಕರಾಗಿ ದುಡಿಯುವ ಮಕ್ಕಳನ್ನು ಗುರುತಿಸಿ ಪುನರ್ವಸತಿ ಗೊಳಿಸಲು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಈ ವೇಳೆ ಸಾರ್ವಜನಿಕರು ಈ ರೀತಿಯ ಮಕ್ಕಳು ಕಂಡು ಬಂದಲ್ಲಿ ಪೋಲಿಸ್ ತುರ್ತು ಸಹಾಯವಾಣಿ=112 ಮಕ್ಕಳ ಸಹಾಯವಾಣಿ 1098 ಮಾಹಿತಿ ನೀಡುವಂತೆ ಕೋರಲಾಯಿತು.
ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾ ಇಲಾಖೆಯ ಜಿಲ್ಲಾ ಘಟಕದ ಅಧಿಕಾರಿಗಳು ಹಾಗೂ ವಿಷನ್ ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದರಾಜು.ಸಿ ಭಾಗವಹಿಸಿದ್ದರು.
