ಯಳಂದೂರು: ಸಹಕಾರ ಸಂಘದಿಂದ ಪಡೆದ ಸಾಲವನ್ನು ನಿಗಧಿತ ಅವಧಿಯೊಳಗೆ ಪಾವತಿಸುವಂತೆ ಗೌಡಹಳ್ಳಿ ಪ್ರಾಥಮಿಕ ಕೃಷಿ ಹೊತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಮಲ್ಲೇಶ್ ಪಂಜು ಹೇಳಿದರು
ಸಾಲ ಪಡೆದ ಸದಸ್ಯರು ನಿಗಧಿತ ಅವಧಿಯೊಳಗೆ ಮರುಪಾವತಿಸಿದರೆ
ಶೂನ್ಯ ಬಡ್ಡಿ ಇರುತ್ತದೆ. ಇಲ್ಲವಾದಲ್ಲಿ ವಾರ್ಷಿಕ ಶೇ. 14 ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ ಎಂದು ಹೇಳಿದರು.
ಸಾಲ ಪಡೆದ ಸದಸ್ಯರು ನಿಗಧಿತ ಅವಧಿಯೊಳಗೆ ಮರುಪಾವತಿಸಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಎಂ. ಮಲ್ಲೇಶ್ ಪಂಜು ಅವರು
ಗುರುವಾರ ಸಂಘದ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಕೋರಿದರು.
2025-26 ನೇ ಸಾಲಿನಲ್ಲಿ ನಮ್ಮ ಸಂಘದಿಂದ 349 ಮಂದಿಗೆ 4.02 ಕೋಟಿ ರೂ. ಗಳ ಕೆಸಿಸಿ ಕಬ್ಬು ಬೆಳೆ ಸಾಲವನ್ನು ನೀಡಲಾಗಿದೆ. ಅಲ್ಲದೆ 15 ಲಕ್ಷ ರೂ.ಗನ್ನು ಎಸ್ಎಚ್ಜಿ ಸಂಘಕ್ಕೆ ಸಾಲವಾಗಿ ನೀಡಲಾಗಿದೆ. ಈ ಸಾಲಿನಲ್ಲಿ ಪಡಿತರ ದಿನಸಿ ಮಾರಾಟ, ಸೀಮೆಎಣ್ಣೆ ಮಾರಾಟ, ಗೊಬ್ಬರ, ಖಾಲಿ ಚೀಲಗಳ ಮಾರಾಟದಿಂದ ಸಂಘಕ್ಕೆ 65.39 ಲಕ್ಷ ರೂ. ಲಾಭ ಬಂದಿದೆ. ಸಂಘದ ಅಭಿವೃದ್ಧಿಗೆ ಎಲ್ಲಾ ಸದಸ್ಯರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರಂಗಸ್ವಾಮಿ2026-27 ನೇ ಸಾಲನ ಸಂಘದ ಆಯವ್ಯಯವನ್ನು ಮಂಡಿಸಿದರು. ಒಟ್ಟು 28 ಲಕ್ಷ ರೂ.ಗಳ ಈ ಬಜೆಟ್ನಲ್ಲಿ ಸಾಲಗಳ ಮೇಲಿನ ಬಡ್ಡಿ, ಠೇವಣಿ ಮೇಲಿನ ಬಡ್ಡಿ ವ್ಯಾಪಾರದ ಲಾಭ ಇತರೆ ಲಾಭಗಳಿಂದ 28 ಲಕ್ಷ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಸುಂದ್ರಮ್ಮ, ನಿರ್ದೇಶಕರಾದ ಶಂಭುಲಿಂಗಪ್ಪ, ರವಿ, ಎಂ. ಸಿದ್ಧರಾಜು, ನಟರಾಜು, ಜಿ.ಪಿ. ಸೋಮಶೇಖರ್, ವಿ.ಎಂ. ಜಯಪಾಲ್, ಎನ್. ಮಹದೇವಸ್ವಾಮಿ, ನೀಲಮ್ಮ, ಆರ್. ರಾಜೇಶ್, ರಾಜಣ್ಣ ನಾಯಕ, ಕೆ. ಲಿಂಗರಾಜು, ಲೆಕ್ಕಿಗ ಎಸ್. ಮಾದೇಶ್, ಜಿ.ವೈ. ಶಶಿಕಿರಣ್, ಎಂ. ಪ್ರಮೋದ್ ಸೇರಿದಂತೆ ಅನೇಕ ಸದಸ್ಯರು ಹಾಜರಿದ್ದರು.
.
