ಮೈಸೂರು: ಮೈಸೂರಿನ ಬೋಗಾದಿ,
ನ್ಯಾಯಾಂಗ ಬಡಾವಣೆ ಬೆಂಚ್ ಕಟ್ಟೆ ಮಾರಮ್ಮ ದೇವಸ್ಥಾನದಲ್ಲಿ ಇಂದು ಸಂಜೆ
ಪ್ರಧಾನಿ ನರೇಂದ್ರ ಮೋದಿಜಿ ಅವರಿಗಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.
ಪ್ರಧಾನಿ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ಅಭಿಯಾನ ಆಶೀರ್ವಾದ ದೀಪ ಬೆಳಗಿ ಪ್ರಧಾನಿಯವರಿಗೆ ಆಯಸ್ಸು ಶ್ರೇಯಸ್ಸು ಸಿಗಲೆಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯದರ್ಶಿರಾಘವೇಂದ್ರ ಡಿ. ಬಿಜೆಪಿ ರೈತ ಮೋರ್ಚ ಕಾರ್ಯದರ್ಶಿ ಪಾಲಚಂದ್ರ, ಬಿಜೆಪಿ ಮುಖಂಡರಾದ ಮಂಜುಳಾ, ಲೋಕೇಶ್,ನಾಗೇಶ್, ಪಾರ್ವತಿ ರಾಮಚಂದ್ರ, ಮುರುಳಿ, ಕ್ರಿಷ್ಣ, ರಾಮಣ್ಣ, ಬಸವಣ್ಣ, ರಾಜು, ಶ್ರೀನಿವಾಸ್, ಸುಬ್ರಮಣ್ಯ, ಮತ್ತಿತರರು ಭಾಗವಹಿಸಿದ್ದರು.
