ಬೆಂಗಳೂರು: ಅಭಿಮನ್ಯು ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಕನ್ನಡಾಂಬೆ ರಕ್ಷಣ ವೇದಿಕೆಯಿಂದ ಗೌರವ ಸನ್ಮಾನ ಮಾಡಲಾಯಿತು.
ಮೈಸೂರು ದಸರಾ ಮಹೋತ್ಸವದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಅಭಿಮನ್ಯುವಿನ ಕುರಿತು ಮೈಸೂರು ನಗರದ ನಾಗರಿಕರು, ಅಭಿಮನ್ಯುವಿನ ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ವ್ಯಕ್ತಪಡಿಸಿದ್ದ ಮನವಿಗೆ ಸ್ಪಂದಿಸಿ ಮೈಸೂರಿಗೆ ಅಭಿಮನ್ಯು ಬರಲು ಕ್ರಮ ಕೈಗೊಂಡಿರುವ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಕನ್ನಡಾಂಬೆ ರಕ್ಷಣ ವೇದಿಕೆ ಅಭಿನಂದನೆ ಸಲ್ಲಿಸಲಾಯಿತು.
ಕನ್ನಡಾಂಬೆ ರಕ್ಷಣ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಬಿ.ಬಿ. ರಾಜಶೇಖರ್ ಅವರ ನೇತೃತ್ವದಲ್ಲಿ ವೇದಿಕೆಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ, ಮೈಸೂರು ನಗರದ ನಾಗರಿಕರು ಹಾಗೂ ಅಭಿಮನ್ಯುನ ಅಭಿಮಾನಿಗಳ ಪರವಾಗಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಬಿ. ರಾಜಶೇಖರ್ ಅವರು, ಮೈಸೂರು ದಸರಾ ಕೇವಲ ಒಂದು ಉತ್ಸವವಲ್ಲ ಅದು ಮೈಸೂರು ಜನತೆಯ ಭಾವನೆ ಮತ್ತು ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿದೆ ಎಂದು ಹೇಳಿದರು.
ಜನರ ಭಾವನೆಗಳಿಗೆ ಗೌರವ ನೀಡಿ, ಅಭಿಮನ್ಯುವಿನನ ಮೇಲಿನ ಅಭಿಮಾನವನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಅವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಮೈಸೂರು ನಗರದ ಸಾರ್ವಜನಿಕರು ಮತ್ತು ವಿವಿಧ ಸಂಘ-ಸಂಸ್ಥೆಗಳು ವ್ಯಕ್ತಪಡಿಸಿದ್ದ ಮನವಿಗೆ ಸ್ಪಂದಿಸಿರುವ ಸಚಿವರಿಗೆ ಮೈಸೂರು ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರ ಪುತ್ರಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಮತ್ತು ಕನ್ನಡಾಂಬೆ ರಕ್ಷಣ ವೇದಿಕೆಯ ಖಜಾಂಜಿ ನಂಜುಂಡ , ತುಮಕೂರು ಜಿಲ್ಲಾ ಅಧ್ಯಕ್ಷರಾದ ಯೋಗೇಶ್ ಗೌಡ( ಕರಿಗೌಡ), ಮಹಿಳಾ ಘಟಕದ ಅಧ್ಯಕ್ಷ ತಾರಾ ಜಿ,ನಾಗರಾಜ್ ವಿ ಮತ್ತಿತರು ಉಪಸ್ಥಿತರಿದ್ದರು.
