ಬೆಳಗಾವಿ: ಸಾಮಾನ್ಯವಾಗಿ ಮನೆ ಕಟ್ಟುವಲು ಅಥವಾ ಇನ್ಯಾವುದಾದರೂ ಕಾರಣಕ್ಕೆ ಭೂಮಿ ಅಗೆಯುವಾಗ ಚಿನ್ನ ಸಿಗುತ್ತದೆ ಎಂದು ಹಿಂದಿನವರು ನಂಬಿದ್ದರು.ಆದರೆ ಎಲ್ಲೋ ಅಪರೂಪಕ್ಕೆ ಒಂದೊಂದು ಕಡೆ ಇದು ನಿಜವಾಗಿದೆ.
ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಚಿನ್ನ ಸಿಕ್ಕಿದ್ದು ಜನ ಕುತೂಹಲ ಭರಿತ ರಾಗಿದ್ದಾರೆ.
ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ವಿಬಿಜಿ ರಾಮ್ ಜಿ ಕೂಲಿ ಕಾರ್ಮಿಕರಿಗೆ 14 ಚಿನ್ನದ ನಾಣ್ಯಗಳು ಸಿಕ್ಕಿವೆ.
ಬಿ.ಸಿ.ಎಂ. ಹಾಸ್ಟೆಲ್ ಸಮೀಪ ವಿಬಿಜಿ ರಾಮ್ಜಿ ಯೋಜನೆಯಡಿ ಕಾಮಗಾರಿ ನಿರ್ವಹಿಸುತ್ತಿದ್ದರು. ಈ ವೇಳೆ ಕೂಲಿ ಕಾರ್ಮಿಕರಿಗೆ ಚಿನ್ನದ ನಾಣ್ಯಗಳು ದೊರೆತಿದೆ.
ಸಧ್ಯ ಕಾರ್ಮಿಕರು ನಾಣ್ಯಗಳನ್ನು ತಕ್ಷಣ ಇಂಚಲ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಕೂಡಲೇ ಇಂಚಲ ಗ್ರಾ.ಪಂ ಕಾರ್ಯಾಲಯಕ್ಕೆ ತಂದು ಅಧಿಕಾರಿಗಳಿಗೆ ನೀಡಿದ್ದಾರೆ.ನಾಣ್ಯಗಳು ಗಂಗರ ಕಾಲದ್ದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಲಹೊಂಗಲ ತಹಶಿಲ್ದಾರರ ಮೂಲಕ ಜಿಲ್ಲಾಡಳಿತ ಚಿನ್ನದ ನಾಣ್ಯಗಳನ್ನು ಪಡೆದುಕೊಂಡು, ಪುರಾತತ್ವ ಇಲಾಖೆಗೆ ಹಸ್ತಾಂತರಿಸಿದೆ.
