ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜೀವ ನಗರದ ಶೈನ್ ಇಂಟರ್ ನ್ಯಾಷನಲ್ ಶಾಲೆ ಮುಂಭಾಗದ ಉದ್ಯಾನವನದಲ್ಲಿ ಟಿಕೆಎಪಿ ಸಹಯೋಗದೊಂದಿಗೆ ಸಿಎಸ್ಆರ್ ಅಡಿಯಲ್ಲಿ ಮಿಯಾವಾಕಿ ಕಿರು ಅರಣ್ಯ ಅಭಿವೃದ್ಧಿಪಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಹೆಚ್ಚುವರಿ ಆಯುಕ್ತೆ ವೀಣಾ ಬಿ.ಎನ್, ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರು (ತೋಟಗಾರಿಕೆ), ಪರಿಸರ ಅಭಿಯಂತರರು, ಆರೋಗ್ಯ ಪರಿವೀಕ್ಷಕರು ಮತ್ತು ತೋಟಗಾರಿಕೆ ನಿರೀಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಾಜೀವ ನಗರದ ಶೈನ್ ಇಂಟರ್ ನ್ಯಾಷನಲ್ ಶಾಲೆ ಮತ್ತು ರೋಸ್ ಮಾಂಟೆಸ್ಸರಿ ಶಾಲೆ ಮುಂಭಾಗದ ಎರಡೂ ಉದ್ಯಾನವನಗಳಲ್ಲಿ ಸುಮಾರು 17,000ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತಿದ್ದು, 3 ವರ್ಷಗಳವರೆಗೆ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಟಿಕೆಎಪಿ ಸಂಸ್ಥೆಯೇ ವಹಿಸಿಕೊಂಡಿದೆ ಎಂದು ಪಾಲಿಕೆ ತಿಳಿಸಿದೆ.
