ಮೈಸೂರು, ಸೆ.3: ಮೈಸೂರಿನ ಲಾ ಕೋರ್ಟ್ ಸಂಕೀರ್ಣ ಹಾಗೂ ಮಳಲವಾಡಿ ನ್ಯಾಯಾಲಯಗಳ ಸಂಕೀರ್ಣಕ್ಕೆ ವಿಶ್ವಸಂಸ್ಥೆಯ ಪ್ರಧಾನ ನ್ಯಾಯಾಂಗ ಅಂಗವಾದ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ಲಿಯೊನಾರ್ಡೊ ನೆಮರ್ ಕಾಲೇರಾ ಬ್ರಾಂಟ್
ಭೇಟಿ ನೀಡಿದರು.
ನ್ಯಾಯಮೂರ್ತಿ ಲಿಯೊನಾರ್ಡೊ ನೆಮರ್ ಕಾಲೇರಾ ಬ್ರಾಂಟ್ ಅವರು ತಮ್ಮ ಪತ್ನಿ ಜಾಯ್ಸ್ ಕೊನ್ನಾ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಈ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ಧಪ್ಪ ಅಂಕಸದೊಡ್ಡಿ, ಮೈಸೂರು ನಗರದ ಎಲ್ಲಾ ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಎಸ್. ಹಾಗೂ ಪದಾಧಿಕಾರಿಗಳು ನಿಯೋಗವನ್ನು ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಲಿಯೊನಾರ್ಡೊ ನೆಮರ್ ಕಾಲೇರಾ ಬ್ರಾಂಟ್ ಅವರು ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದು, ಅಂತರಾಷ್ಟ್ರೀಯ ನ್ಯಾಯಾಲಯದ ಕಾರ್ಯವೈಖರಿ ಕುರಿತು ಮಾಹಿತಿ ಹಂಚಿಕೊಂಡರು. ಸಾಂಸ್ಕೃತಿಕ ನಗರಿ ಮೈಸೂರಿನ ಪರಂಪರೆಯನ್ನು ಶ್ಲಾಘಿಸಿದರು.
