(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಬಿಜಿ ರಾಮ್ ಜಿ (ನರೇಗಾ) ಕಾಮಗಾರಿ ಕಳೆದ ಮೂರು ದಿನಗಳಿಂದ ಭರದಿಂದ ಸಾಗಿದೆ.
ಗ್ರಾಮದ ಬೈಪಾಸ್ ಜಂಕ್ಷನ್ ನಲ್ಲಿ ರುವ ಕೆರೆಯಲ್ಲಿ ಮಧುವನಹಳ್ಳಿ ಗ್ರಾಮ ಪಂಚಾಯತಿ ವಿಬಿಜಿ ರಾಮ್ ಜಿ (ನರೇಗಾ) ಯೋಜನೆಯಡಿ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಿದೆ. ಮಧುವನಹಳ್ಳಿ ಗ್ರಾಮದ 80 ಮಂದಿ ಕೂಲಿ ಕಾರ್ಮಿಕರು ಕೆರೆಯಲ್ಲಿ ಭಾಗಿಯಾಗಿದ್ದಾರೆ.
ಮಳೆಯಿಲ್ಲದ ಕಾರಣ ಜನರು ಕೆಲಸ, ಕೂಲಿಯಿಲ್ಲದೆ ಜೀವನ ನಿರ್ವಹಿಸಲು ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಕಂಗಾಲಾಗಿದ್ದಾರೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಆ.31 ರ ಸೋಮವಾರದಿಂದಲೇ ಕಾಮಗಾರಿ ಪ್ಲಾರಂಭಿಸಲಾಗಿದ್ದು ಮೊದಲನೆಯ ದಿನ 17 ಮಂದಿ 2 ನೇ ದಿನ 65 ಮಂದಿ 3ನೇ ದಿನ 86 ಮಂದಿ ಕೆಲಸ ಮಾಡುತ್ತಿದ್ದಾರೆ.
ಪ್ರತಿ ತಂಡದಲ್ಲಿ 14 ಮಂದಿಯಂತೆ 5 ತಂಡಗಳಲ್ಲಿ 70 ಮಂದಿ ಕೆರೆಯ ಹೂಳೆತ್ತುವ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದು ಉಳಿದ 10 ಮಂದಿ ಜಂಗಲ್ ಕಟಿಂಗ್ ಕೆಲಸ ಮಾಡುತ್ತಿದ್ದಾರೆ.
ಕಾಯಕ ಬಂಧು ಪ್ರತಿನಿಧಿ ಕಾಮಗಾರಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೋಭರಾಣಿ ಮಾಹಿತಿ ನೀಡಿದರು.
