ಮೈಸೂರು: ಸಚಿವರಾದ ನಂತರ ಇದೇ ಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿದ ರಿಜ್ವಾನ್ ಅರ್ಷದ್ ಅವರನ್ನು ಕಾಂಗ್ರೆಸಿಗರು ಆತ್ಮೀಯವಾಗಿ ಸ್ವಾಗತಿಸಿದರು.
ಇಂದು ಆಹಾರ ನಾಗರಿಕ ಸರಬರಾಜು ಸಚಿವರಾದ ನಂತರ ಪ್ರಥಮ ಬಾರಿ ಮೈಸೂರಿಗೆ ಆಗಮಿಸಿದ ರಿಜ್ವಾನ್ ಅವರನ್ನು ಮೈಸೂರು ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.
ಈ ವೇಳೆ ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್,ಮಾಜಿ ಮಹಾಪೌರರಾದ ಆರಿಫ್ ಹುಸೈನ್, ಲೋಕೇಶ್, ಕೃಷ್ಣಪ್ಪ ಗಂಟೆಯ,ಜಿ ರಾಘವೇಂದ್ರ ಮತ್ತು ಪಕ್ಷದ ಕಾರ್ಯಕರ್ತರು ಮುಖಂಡರು ರಿಜ್ವಾನ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿ ಅಭಿನಂದಿಸಿದರು.
